
ಮೈಸೂರು: ಮೈಸೂರಿನ ಟಿ.ನರಸೀಪೂರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತಮಟೆ ವಾದ್ಯದಲ್ಲಿ ಪರಿಣಿತರು. ಈ ಶಾಲೆಯ ಪ್ರಾಧ್ಯಾಪಕರುಗಳು ಪುರಾತನ ಕಾಲದ ಕಲೆಯನ್ನು ಉಳಿಸಿ ಬೆಳಿಸುವ ನಿಟ್ಟಿನಲ್ಲಿ ಪರಿಣಿತರು. ವಿದ್ಯಾರ್ಥಿಗಳು ಒಂದು ವೇಳೆ ನಿರುದ್ಯೋಗಿಗಳಾದರು ಇಲ್ಲಿ ಕಲಿಸುವ ಕಲೆಯಿಂದ ಉದ್ಯೋಗ ಹುಡುಕಿಕೊಂಡು ಹೋಗಬಹುದು.
ಇತ್ತೀಚಿಗೆ ಪ್ರಯೋಗಿಕವಾಗಿ ಶಾಲೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರು ವಿದ್ಯಾರ್ಥಿಗಳು ತಮಟೆ ಭಾರಿಸಿದರೆ, ಆ ಸದ್ದಿಗೆ ಹೆಜ್ಜೆ ಹಾಕಿ ವಿದ್ಯಾರ್ಥಿನಿಯರು ನೃತ್ಯ ಮಾಡಿದರು. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತ್ತು.




