Top Newsಸಿನಿಮಾಸುದ್ದಿ

‘ಟೈಟಾನಿಕ್’ ಸಿನಿಮಾ ನಿರ್ಮಾಪಕ ಜಾನ್ ಲ್ಯಾಂಡೌ ನಿಧನ

ಟೈಟಾನಿಕ್  , ಅವತಾರ್ ಚಿತ್ರದ ನಿರ್ಮಾಪಕ ಜಾನ್ ಲ್ಯಾಂಡೌ 63ನೇ ವಯಸ್ಸಿಗೆ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ನಿರ್ಮಾಪಕ ವಿಧಿವಶರಾಗಿದ್ದಾರೆ. ಅವರ ನಿಧನದ ಕುರಿತು ಕುಟುಂಬಸ್ಥರು ಅಧಿಕೃತವಾಗಿ ತಿಳಿಸಿದ್ದಾರೆ.

ಹಾಲಿವುಡ್‌ನಲ್ಲಿ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿರುವ ಜಾನ್ ಲ್ಯಾಂಡೌ ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ಯಾನ್ಸರ್ ವಿರುದ್ಧ ಅವರು ಹೋರಾಡುತ್ತಿದ್ದರು. ಈಗ ಅವರ ನಿಧನದ ಸುದ್ದಿ ಕುಟುಂಬಕ್ಕೆ, ಆಪ್ತರಿಗೆ ಶಾಕ್ ಕೊಟ್ಟಿದೆ.

ಈಗ ಜಾನ್ ಲ್ಯಾಂಡೌ ನಿಧನದ ಸುದ್ದಿ ಕೇಳಿ ಹಾಲಿವುಡ್  ಮಂದಿಗೆ ಆಘಾತವಾಗಿದೆ. ಅವರ ನಿಧನಕ್ಕೆ ಚಿತ್ರರಂಗದ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button