ಸಿನಿಮಾಸುದ್ದಿ

ದೇವರಂಥ ಮನುಷ್ಯ, ನಾಯಿಯಂತ ಬುದ್ಧಿ- ದರ್ಶನ್‌ಗೆ ತಿವಿದ ಉಮಾಪತಿ

ಬೆಂಗಳೂರು: ಕನ್ನಡದ ಖ್ಯಾತ ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ಅರೆಸ್ಟ್ ಆಗಿದ್ದಾರೆ. ಈ ವಿಚಾರಕ್ಕೆ ‘ರಾಬರ್ಟ್’ ನಿರ್ಮಾಪಕ ಉಮಾಪತಿ  ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆ ಮಾಡುವುದು ಅಕ್ಷಮ್ಯ ಅಪರಾಧ. ಅದು ಯಾರೇ ಮಾಡಿದ್ರೂ ತಕ್ಕ ಶಿಕ್ಷೆಯಾಗಬೇಕು ಎಂದು ಮಾತನಾಡಿದ್ದಾರೆ.

ಕೊಲೆ ಮಾಡುವುವು ಅಕ್ಷಮ್ಯ ಅಪರಾಧ. ಯಾರೇ ಅಪರಾಧ ಮಾಡಿದ್ರು ತಪ್ಪು ತಪ್ಪೇ ಅದು. ನಾನು ಕೆಲವೊಂದು ಕೇಳಿರೋದು. ರೇಣುಕಾಸ್ವಾಮಿ ಬಿಡಿ ಎಂದೂ ಎಷ್ಟೇ ಬೇಡಿಕೊಂಡರು ಬಿಡಲಿಲ್ಲ ಅಂತ. ಮೆಗ್ಗಾರ್‌ನಲ್ಲಿ ತರಿಸಿ ಹೊಡೆದಿರೋದು. ಹಾಗಾದ್ರೆ ಅವರನ್ನು ಸಾಯಿಸಬೇಕು ಅಂತ ಯೋಚಿಸಿಯೇ ಹೀಗೆ ಮಾಡಿದ್ರಾ? ಗೊತ್ತಿಲ್ಲ ಎಂದು ಉಮಾಪತಿ ಮಾತನಾಡಿದ್ದಾರೆ.

ನನ್ನ ತಂದೆ ತೀರಿಕೊಂಡು 12 ವರ್ಷವಾಗಿದೆ. ನನ್ನ ತಂದೆ ನಮಗೆ ದಾರಿ ತೋರಿಸಿದರು ಕೂಡ ನಮಗೆ ಕಷ್ಟ ಇತ್ತು. ಆದರೆ ಯಾವ ದಾರಿ ಹುಡುಕಬೇಕು ಎಂದು ಗೊತ್ತಾಗಲಿಲ್ಲ. ಇನ್ನೂ ಈಗ ಹುಟ್ಟಲಿರುವ ಮಗುವಿಗೆ ನಿಮ್ಮ ಅಪ್ಪ ಹೀಗೆ ಸತ್ತ ಅಂತ ಗೊತ್ತಾದರೆ ಎಷ್ಟು ನೋವಾಗುತ್ತದೆ ಎಂದಿದ್ದಾರೆ. ರೇಣುಕಾಸ್ವಾಮಿಗೆ ಪತ್ನಿಗೆ ಈ ಘಟನೆಯಿಂದ ಮಾತನಾಡೋಕು ಬರುತ್ತಿಲ್ಲ. ಅವರೆಲ್ಲಾ ಮುಗ್ಧ ಜನ. ಹೀಗೆ ಆಗುತ್ತೆ ಅಂತ ಮೊದಲೇ ಗೊತ್ತಿದ್ರೆ ರೇಣುಕಾಸ್ವಾಮಿ ಹೀಗೆ ಮಾಡ್ತಿದ್ನಾ? ದರ್ಶನ್ ಮೇಲಿನ ಪ್ರೀತಿ ಅಭಿಮಾನಕ್ಕೆ ಹೀಗೆ ಮಾಡಿದ್ದಾನೆ ಅಲ್ವಾ? ಎಂದು ಉಮಾಪತಿ ಪ್ರಶ್ನಿಸಿದ್ದಾರೆ.
ಈಗೀನ ದಿನಗಳಲ್ಲಿ ಕೆಲ ಅಭಿಮಾನಿಗಳು ಎದೆಯ ಮೇಲೆ ಹಚ್ಚೆ ಹಾಕಿಕೊಂಡು ನಾನು ಎದೆ ಬಗೆದು ತೋರಿಸಿ ಬಿಡ್ತೀನಿ ಅನ್ನೋಕೆ ಶ್ರೀರಾಮನ ತೋರಿಸುವಂತಹ ಆಂಜನೇಯ ಈಗ ಇಲ್ಲ. ಭಕ್ತಿ ತೋರಿಸುವ ಕಾಲ ಇದಲ್ಲ ಎಂದಿದ್ದಾರೆ. ನೀನು ಬದುಕು ನಾನು ಬದುಕುತ್ತೀನಿ ಅಂತಿರಬೇಕು ದೇವರಂಥ ಮನುಷ್ಯ ನಾಯಿಯಂತ ಬುದ್ಧಿ ಎಂದು ಮಾತು ಹೇಳುವ ಮೂಲಕ ದರ್ಶನ್‌ಗೆ ಟಾಂಗ್ ಕೊಟ್ಟಿದ್ದಾರೆ ಉಮಾಪತಿ.
ಅಂದಹಾಗೆ, 2021ರಲ್ಲಿ ಬಿಡುಗಡೆಯಾದ ದರ್ಶನ್ ನಟನೆಯ `ರಾಬರ್ಟ್’ ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button