Tuesday, June 24, 2025
26.6 C
Bengaluru
Google search engine
LIVE
ಮನೆಸಿನಿಮಾಶ್ರೀಲೀಲಾ ಬರ್ತ್​ಡೇಗೆ ಪೋಸ್ಟರ್​ಗಳ ಸುರಿಮಳೆ; ರಶ್ಮಿಕಾ ಹಿಂದಿಕ್ಕಿದ ನಟಿ

ಶ್ರೀಲೀಲಾ ಬರ್ತ್​ಡೇಗೆ ಪೋಸ್ಟರ್​ಗಳ ಸುರಿಮಳೆ; ರಶ್ಮಿಕಾ ಹಿಂದಿಕ್ಕಿದ ನಟಿ

ಟಾಲಿವುಡ್​ನ ಬೇಡಿಕೆಯ ಹೀರೋಯಿನ್​ಗಳ ಪೈಕಿ ಕನ್ನಡದ ನಟಿ ಶ್ರೀಲೀಲಾ  ಮುಂಚೂಣಿಯಲ್ಲಿದ್ದಾರೆ. ಇಂದು (ಜೂನ್ 14) ಅವರ ಜನ್ಮದಿನ. ಈ ವಿಶೇಷ ದಿನಂದು ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ. ಇಷ್ಟೇ ಅಲ್ಲ, ಅವರ ನಟನೆಯ ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿದೆ. ಅವರು ಅಲ್ಲು ಅರ್ಜುನ್ ಚಿತ್ರಕ್ಕೆ  ನಾಯಕಿ ಆಗಿದ್ದಾರೆ ಅನ್ನೋದು ವಿಶೇಷ. ಐದಕ್ಕೂ ಹೆಚ್ಚು ಸಿನಿಮಾ ತಂಡದಿಂದ ನಟಿಗೆ ಬರ್ತ್​ಡೇ ವಿಶ್ ಬಂದಿದೆ. ಈ ಮೂಲಕ ನಟಿ ರಶ್ಮಿಕಾ ಮಂದಣ್ಣ ಅವರನ್ನು ಹಿಂದಿಕ್ಕಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಟಾಲಿವುಡ್​ನ ಬೇಡಿಕೆಯ ನಟಿ ಆಗಿದ್ದಾರೆ. ಹಲವು ಸಿನಿಮಾ ಒಪ್ಪಿ ಅವರು ನಟಿಸಿದ್ದಾರೆ. ಈಗ ಟಾಲಿವುಡ್​ನಲ್ಲಿ ಶ್ರೀಲೀಲಾ ಬೇಡಿಕೆ ಹೆಚ್ಚುತ್ತಿದೆ. ಅಲ್ಲು ಅರ್ಜುನ್ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಶ್ರೀಲೀಲಾ ಸಿನಿಮಾ ಲೈನಪ್​ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ.

ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದಲ್ಲಿ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಇದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ನಿತಿನ್ 32ನೇ ಚಿತ್ರಕ್ಕೆ ಅವರು ನಾಯಕಿ. ಇದರ ಪೋಸ್ಟರ್​ ಕೂಡ ರಿಲೀಸ್ ಆಗಿದೆ. ‘ಬೋಯಪತಿ ರ್ಯಾಪೋ’ ಸಿನಿಮಾದಲ್ಲೂ ಶ್ರೀಲೀಲಾ ನಟಿಸುತ್ತಿದ್ದು, ಪೋಸ್ಟರ್​ ಬಿಡುಗಡೆ ಆಗಿದೆ.

ಅಲ್ಲು ಅರ್ಜುನ್ ಅವರು ಸ್ಟಾರ್ ಡೈರೆಕ್ಟರ್ ತ್ರಿವಿಕ್ರಂ ಶ್ರೀನಿವಾಸ್​ ಜೊತೆ ಸಿನಿಮಾ ಮಾಡುತ್ತಿದ್ದಾರೆ. ‘ಆಹಾ’ ನಿರ್ಮಾಣದ ಮೊದಲ ಸಿನಿಮಾ ಇದು. ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ. ‘ಆಹಾ’ ಕಡೆಯಿಂದ ಒಂದು ಪೋಸ್ಟರ್ ಕೂಡ ಬಿಡುಗಡೆ ಆಗಿದೆ. ಈ ಪೋಸ್ಟರ್​ನಲ್ಲಿ ಅಲ್ಲು ಅರ್ಜುನ್ ಅವರು ಶ್ರೀಲೀಲಾ ಅವರನ್ನು  ತೋಳುಗಳಲ್ಲಿ ಎತ್ತುಕೊಂಡಿದ್ದಾರೆ. ಇವರ ಕಾಂಬಿನೇಷನ್​​ನಲ್ಲಿ ಇದು ಮೊದಲ ಸಿನಿಮಾ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments