Top Newsಸಿನಿಮಾಸುದ್ದಿ

ರೇಣುಕಾಸ್ವಾಮಿ ಮರಣೋತ್ತರ ವರದಿ ಬಹಿರಂಗ – ಮರ್ಮಾಂಗಕ್ಕೆ ಒದ್ದಿದ್ದರಿಂದಲೇ ಸಾವು

ಬೆಂಗಳೂರು: ನಟ ದರ್ಶನ್ ಹಾಗೂ ಆತನ ಸ್ನೇಹಿತರಿಂದ ಹಲ್ಲೆಗೊಳಲಾಗಿ ಸಾವಿಗೀಡಾಗಿದ್ದಾರೆಂದು ಹೇಳಲಾಗಿರುವ ಚಿತ್ರದುರ್ಗದ ರೇಣುಕಾ ಸ್ವಾಮಿಯವರ ಮರಣೋತ್ತರ ವರದಿ ಮಾಧ್ಯಮಗಳಿಗೆ ಸಿಕ್ಕಿದ್ದು ಅದರಲ್ಲಿ ಗುಪ್ತಾಂಗದ ಮೇಲೆ ಬಿದ್ದಿರುವ ತೀವ್ರವಾದ ಹೊಡೆತಗಳಿಂದಲೇ ಆತ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ, ರೇಣುಕಾಸ್ವಾಮಿಯವರ ಪ್ರಕರಣದಲ್ಲಿ ದರ್ಶನ್ ಅವರು ಬಂಧನಕ್ಕೀಡಾಗಿದ್ದಾರೆ. ದರ್ಶನ್ ಹಾಗೂ ಅವರ ಸ್ನೇಹಿತರು ಆತನನ್ನು ಥಳಿಸಿದ್ದಕ್ಕೆ ಆತ ಕೊನೆಯುಸಿರೆಳೆದಿದ್ದಾನೆ ಎಂಬ ಆರೋಪವಿದೆ. ಅದರಲ್ಲೂ ದರ್ಶನ್ ಅವರು ಮರ್ಮಾಂಗಕ್ಕೆ ಹೊಡೆದಿದ್ದರಿಂದಲೇ ಆತನ ಪ್ರಾಣ ಹೋಗಿದೆ ಎಂದು ಹೇಳಲಾಗಿದೆ. ಆದರೆ, ದರ್ಶನ್ ಕಡೆಗಿನ ವಾದದಲ್ಲಿ ದರ್ಶನ್ ಹೊಡೆದಿದ್ದರಿಂದ ಆತ ಸತ್ತಿಲ್ಲ ಎನ್ನಲಾಗುತ್ತಿದೆ.

ಈ ಎಲ್ಲಾ ಕಾರಣಗಳಿಗಾಗಿ, ರೇಣುಕಾ ಸ್ವಾಮಿಯವರ ಮರಣೋತ್ತರ ವರದಿಗಾಗಿ ಪೊಲೀಸರು ಕಾಯುತ್ತಿದ್ದು ಅದರಲ್ಲೀಗ ಮರ್ಮಾಂಗಕ್ಕೆ ಬಿದ್ದ ಪೆಟ್ಟು ಹಾಗೂ ಅದರಿಂದಾದ ರಕ್ತಸ್ರಾವದಿಂದಲೇ ಆತ ಸಾವಿಗೀಡಾಗಿರುವ ಬಗ್ಗೆ ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿವೆ. ಇದು ದರ್ಶನ್ ವಿರುದ್ಧದ ಸಾಕ್ಷ್ಯಾಧಾರಗಳಿಗೆ ಮತ್ತಷ್ಟು ಪುಷ್ಠಿ ನೀಡುವ ಸಾಧ್ಯತೆಗಳಿವೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button