Freedom TV

ದೊಡ್ಡ ನಟನ ಹೆಸರು ಇದರಲ್ಲಿ ಕೇಳಿ ಬಂದ ತಕ್ಷಣ ಹಲವು ಅನುಮಾನಗಳು ಹುಟ್ಟುತ್ತವೆ- ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ರೇಣುಕಾಸ್ವಾಮಿ ಕೊಲೆ ರಾಕ್ಷಸಿ ಕೃತ್ಯವಾಗಿದೆ. ಈ ಕೊಲೆಯ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಬೆಳಗಾವಿ ನೂತನ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆಯಲ್ಲಿ ನಟ ದರ್ಶನ ಅವರ ಹೆಸರು ಬಂದಿದೆ. ದರ್ಶನ ಹಿಂಬಾಲಕರು ಈ ಹತ್ಯೆ ಮಾಡಿದ್ದಾರೆ ಎಂಬ ಸುದ್ದಿಗಳು ಬರುತ್ತಿವೆ ಎಂದರು.

ರೇಣುಕಾಸ್ವಾಮಿ ಸೊಸಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ವರ್ತಿಸಿದ್ದರೆ ಅದಕ್ಕೆ ಸೈಬರ್ ಠಾಣೆ ಇತ್ತು. ಅವೆಲ್ಲವನ್ನೂ ಬಿಟ್ಟು ತಾವೇ ಈ ರೀತಿ ಕಾನೂನು ಕೈಗೆತ್ತಿಕೊಳ್ಳುವುದು ಎಷ್ಟು ಸರಿ ಈ ಕೊಲೆಯಲ್ಲಿ ಆರೋಪಿಗಳು ಎಷ್ಟೇ ದೊಡ್ಡ ವ್ಯಕ್ತಿ ಇದ್ದರೂ ಕಠಿಣ ಶಿಕ್ಷೆ ಆಗಲೇ ಬೇಕು’’ ಎಂದು ಶೆಟ್ಟರ್ ಆಗ್ರಹಿಸಿದರು.

ದೊಡ್ಡ ನಟನ ಹೆಸರು ಇದರಲ್ಲಿ ಕೇಳಿ ಬಂದ ತಕ್ಷಣ ಹಲವು ಅನುಮಾನಗಳು ಹುಟ್ಟುತ್ತವೆ. ಇಂದು ಈ‌ ಕೊಲೆಯನ್ನು ಅವರ ಹಿಂಬಾಲಕರು ಮಾಡಿದ್ದಾರೆ ಎಂಬ ಸುದ್ದಿಗಳು ಬರುತ್ತಿವೆ ಎಂದಿದ್ದಾರೆ.

Comments (0)

Your email address will not be published. Required fields are marked *

Back to top button