ಸಿನಿಮಾಸುದ್ದಿ

‘ಸಪ್ತಮಿ’ ಗೌಡ ಜೊತೆ ‘ಯುವ’ ಅಫೇರ್

ಬೆಂಗಳೂರು: ದೊಡ್ಮನೆ ಕುಡಿ ಯುವರಾಜ್ ಕುಮಾರ್ ಮತ್ತು ಶ್ರಿದೇವಿ ವಿಚ್ಛೇದನ ವಿಚಾರಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಶ್ರೀದೇವಿ, ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಂದು ಹೆಣ್ಣಿನ ಚಾರಿತ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ’ ಎಂದು ಬರೆದಿಕೊಂಡಿದ್ದಾರೆ.

ಡಿವೋರ್ಸ್‌ ನೋಟಿಸ್‌ ಬೆನ್ನಲ್ಲೇ ನಟ ಯುವ ರಾಜ್‌ಕುಮಾರ್‌ ಹಾಗೂ ಅವರ ಪತ್ನಿ ಶ್ರೀದೇವಿ ಭೈರಪ್ಪ ಅವರ ನಡುವೆ ಆರೋಪ-ಪ್ರತ್ಯಾರೋಪಗಳು ಜಾಸ್ತಿಯಾಗಿವೆ. ಪರಸ್ಪರ ಅಕ್ರಮ ಸಂಬಂಧಗಳ ಕುರಿತು ಬಹಿರಂಗ ಆರೋಪಗಳು ಹೆಚ್ಚಾಗಿವೆ. ಈಗ ಶ್ರೀದೇವಿ ಭೈರಪ್ಪ ಅವರು ಯುವ ರಾಜ್‌ಕುಮಾರ್‌ ನಟಿ ಸಪ್ತಮಿ ಗೌಡ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.

ಶ್ರೀದೇವಿ ಭೈರಪ್ಪ ಅವರು ರಾಧಯ್ಯ ಎಂಬ ವ್ಯಕ್ತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ. ನಟನ ಲೀಗಲ್‌ ನೋಟಿಸ್‌ಗೆ ಉತ್ತರಿಸಿದ ಶ್ರೀದೇವಿ ಭೈರಪ್ಪ, “ಯುವ ರಾಜ್‌ಕುಮಾರ್‌ ನಟಿ ಸಪ್ತಮಿ ಗೌಡ ಜತೆ ಸಂಬಂಧ ಹೊಂದಿದ್ದಾರೆ” ಎಂಬುದಾಗಿ ಆರೋಪಿಸಿದ್ದಾರೆ. ಆ ಮೂಲಕ ಡಿವೋರ್ಸ್‌ ಪ್ರಕರಣವೀಗ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ.

ಇದೇ ವರ್ಷದ ಮೇ 30ರಂದು ಶ್ರೀದೇವಿ ಭೈರಪ್ಪ ಅವರು ರಿಪ್ಲೈ ನೋಟಿಸ್‌ ನೀಡಿದ್ದಾರೆ. “ಸಪ್ತಮಿ ಗೌಡ ಜತೆಗೆ ಯುವ ರಾಜ್‌ಕುಮಾರ್‌ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ನನ್ನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದರು. ಪ್ರೀತಿಸಿ ಮದುವೆಯಾದ ಯುವ ರಾಜ್‌ಕುಮಾರ್‌, ಬಳಿಕ ಸಪ್ತಮಿ ಗೌಡ ಹಿಂದೆ ಬಿದ್ದಿದ್ದಾರೆ” ಎಂಬುದಾಗಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದಾರೆ.

ನಾನು ಹಾಗೂ ಯುವ ರಾಜ್‌ಕುಮಾರ್‌ 5 ವರ್ಷ ಪ್ರೀತಿಸಿದ್ದೆವು. 2019ರಲ್ಲಿ ಹಿಂದು ಸಂಪ್ರದಾಯದಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಮಾಡಿಕೊಂಡೆವು. ಮದುವೆಗೂ ಮುಂಚೆ ಯುವ ರಾಜ್‌ಕುಮಾರ್‌ ನಿರುದ್ಯೋಗಿ ಆಗಿದ್ದರು. ಅವರಿಗೆ ಕರಿಯರ್‌ ಬಗ್ಗೆ ಫೋಕಸ್‌ ಇರಲಿಲ್ಲ. ಅವರ ಕುಟುಂಬವು ಕೂಡ ಆರ್ಥಿಕವಾಗಿ ಸ್ಟೇಬಲ್‌ ಇರಲಿಲ್ಲ. ಇದಾದ ಬಳಿಕ ಯುವ ರಾಜ್‌ಕುಮಾರ್‌ ಸಪ್ತಮಿ ಗೌಡ ಹಿಂದೆ ಬಿದ್ದರು. ನಟಿಯನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ಸಪ್ತಮಿ ಗೌಡ ಜತೆ ಹೋಟೆಲ್‌ನಲ್ಲಿ ಇರುವಾಗಲೇ ಯುವ ಸಿಕ್ಕಿಬಿದ್ದಿದ್ದರು. ಸಂಬಂಧ ಗೊತ್ತಾದ ಮೇಲೆ ನನ್ನ ಮೇಲೆ ಆರೋಪ ಮಾಡಲು ಶುರುವಿಟ್ಟುಕೊಂಡರು” ಎಂಬುದಾಗಿ ಶ್ರೀದೇವಿ ಆರೋಪಿಸಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button