
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಾರ್ತಿಕ್ ಜಯರಾಮ್ (ಜೆಕೆ) ಅವರು ಒಂದು ಮುದ್ದಾದ ಬೇಬಿಯನ್ನು ಎತ್ತಿಕೊಂಡು ಖುಷಿ ಪಡುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ‘ಮುಧುಶ್ರೀ ಮಲ್ಲೇಶ್’ ಇನ್ಸ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋಗೆ ಬಹಳಷ್ಟು ಲೈಕ್ಸ್ ಹಾಗೂ ಕಾಮೆಂಟ್‌ಗಳು ಹರಿದುಬರುತ್ತಿವೆ. ಜೆಕೆ ಎತ್ತಿಕೊಂಡು ಮುದ್ದು ಮಾಡುತ್ತಿರುವ ಪಾಪು ಯಾರದು ಎಂಬುದು ಹಲವರ ಪ್ರಶ್ನೆ.
ಈವೀಡಿಯೋ ಪೋಸ್ಟ್ ಮಾಡಿರುವ ಮಧುಶ್ರೀ ಎಂಬವರು ‘ಥ್ಯಾಂಕ್ಯೂ ಸೂಪರ್ ಸ್ಟಾರ್ ಜೆಕೆ, ಯು ಮೇಡ್ ಮೈ ಡೇ’ ಎಂದು ವೀಡೀಯೋಗೆ ಕ್ಯಾಪ್ಶಶ್ ಕೊಟ್ಟಿದ್ದಾರೆ. ಅಭಿಮಾನಿಯ ಮಗುವನ್ನು ಎತ್ತಿಕೊಂಡು ಖುಷಿ ಅನುಭವಿಸುತ್ತಿರುವ ಜೆಕೆ ಅವರನ್ನು ನೋಡಿ, ಅವರ ಹಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ವಿಭಿನ್ನವಾಗಿ ಮೆಚ್ಚುಗೆ ಸೂಚಿಸಿದ್ದಾರೆ, ಅವರಲ್ಲೊಬ್ಬರು, ನಿಮ್ಮ ಮುಖದಲ್ಲಿ ಮೂಡಿರುವ ಮಂದಹಾಸವನ್ನು ನೋಡಿದರೇನೇ ನೀವು ಮಕ್ಕಳನ್ನು ಅದೆಷ್ಟು ಇಷ್ಟಪಡುತ್ತೀರಿ ಎಂದು ಅರ್ಥವಾಗುತ್ತದೆ ಎಂದು ಬರೆದಿದ್ದರೆ, ಇನ್ನೊಬ್ಬರು ‘ಮತ್ತೆ ಸೀರಿಯಲ್ ಮಾಡಬಹುದಿತ್ತಲ್ಲ ಜೆಕೆ ಸರ್, ಅಶ್ವಿನಿ ನಕ್ಷತ್ರದಲ್ಲಂತೂ ನಿಮ್ ಆಕ್ಟಿಂಗ್ ಸೂಪರ್’ ಎಂದು ಬರೆದಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com




