Thursday, May 1, 2025
34.1 C
Bengaluru
LIVE
ಮನೆ#Exclusive NewsTop Newsಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಸಿನಿಮಾ ತಾರೆಯರು ಯಾರು?

ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಸಿನಿಮಾ ತಾರೆಯರು ಯಾರು?

ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾರೆಲ್ಲಾ ಸೆಲೆಬ್ರಿಟಿಗಳು ಗೆದ್ದರು. ಗದ್ದುಗೆಯ ಗುದ್ದಾಟದಲ್ಲಿ ಸೋತವರ್ಯಾರು, ಗೆದ್ದವರು ಯಾರು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಮುಂದೆ ಕ್ವೀನ್ ಕಂಗನಾ ಗೆದ್ದಿದ್ದಾರೆ. ಹಿಮಾಚಲ ಪ್ರದೇಶ ಮಂಡಿಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. 70000 ಸಾವಿರಕ್ಕೂ ಅಧಿಕ ಮತಗಳಿಂದ ನಟಿ ಗೆದ್ದಿದ್ದಾರೆ. ತಮ್ಮ ಮೊದಲ ಗೆಲುವನ್ನು ನರೇಂದ್ರ ಮೋದಿಗೆ ಅರ್ಪಿಸಿದ್ದಾರೆ.

ಮೇ 13ರಂದು ನಡೆದ ಆಂಧ್ರಪ್ರದೇಶದ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 1,32,725 ಮತಗಳನ್ನು ಪಡೆಯುವ ಮೂಲಕ ಪವನ್ ಕಲ್ಯಾಣ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜಗನ್ ಮೋಹನ್ ರೆಡ್ಡಿಗೆ ಪವನ್ ಠಕ್ಕರ್ ಕೊಟ್ಟಿದ್ದಾರೆ.

ಬಾಲಿವುಡ್ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಮಥುರಾದಲ್ಲಿ 3ನೇ ಬಾರಿ ಗೆಲುವಿನ ಭಾವುಟ ಹಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುಕೇಶ್ ವಿರುದ್ಧ ಭಾರೀ ಮತಗಳ ಅಂತರದಲ್ಲಿ ನಟಿ ಗೆದ್ದಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಟಿ ರೋಜಾ ಹೀನಾಯವಾಗಿ ಸೋತಿದ್ದಾರೆ. ತಮಿಳುನಾಡಿನ ವಿರುಧುನಗರ್ ಕ್ಷೇತ್ರದಿಂದ ನಟಿ ರಾಧಿಕಾ ಶರತ್‌ಕುಮಾರ್ ಬಿಜೆಪಿ ಸ್ಪರ್ಧಿಯಾಗಿ ಕಣಕ್ಕೆ ನಿಂತಿದ್ದರು. ನಟಿ ಹೀನಾಯವಾಗಿ ಸೋಲುಂಡಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments