ಸಿನಿಮಾಸುದ್ದಿ

‘ರಾಕಿ ಭಾಯ್‌’ ಮನೆಗೆ ತಲುಪಿತು ಪ್ರಭಾಸ್ ಕಳುಹಿಸಿದ ‘ಸ್ಪೆಷಲ್‌’ ಗಿಫ್ಟ್ ; ಗಿಫ್ಟ್ ಏನು ಗೊತ್ತಾ ?

ಬೆಂಗಳೂರು : ‘ಪ್ಯಾನ್ ಇಂಡಿಯಾ ಸ್ಟಾರ್’ ಪ್ರಭಾಸ್‌ ಅವರು ‘ರಾಕಿಂಗ್ ಸ್ಟಾರ್’ ಯಶ್ ಕುಟುಂಬಕ್ಕೆ ಒಂದು ಸ್ವೀಟ್ ಸರ್ಪ್ರೈಸ್ ನೀಡಿದ್ದಾರೆ. ಏನಪ್ಪ ಅದು ಸ್ವೀಟ್ ಸರ್ಪ್ರೈಸ್? ಉಡುಗೊರೆ! ಹೌದು, ಯಶ್ ಅವರ ಮಕ್ಕಳಗಾಗಿಯೇ ಒಂದು ಸ್ಪೆಷಲ್ ಉಡುಗೊರೆಯನ್ನು ಹೈದರಾಬಾದ್‌ನಿಂದ ಕಳುಹಿಸಿಕೊಟ್ಟಿದ್ದಾರೆ ಪ್ರಭಾಸ್. ಈ ಗಿಫ್ಟ್‌ಗೂ ಮತ್ತು ಪ್ರಭಾಸ್ ಅವರ ಮುಂದಿನ ‘ಕಲ್ಕಿ 2898 ಎಡಿ’ ಸಿನಿಮಾಗೂ ಒಂದು ಕನೆಕ್ಷನ್ ಇದೆ ಅನ್ನೋದು ಇನ್ನೋದು ವಿಶೇಷ.

ಈ ಉಡುಗೊರೆ ಜೊತೆಗೆ ಯಶ್ ಮಕ್ಕಳಾದ ಆಯ್ರಾ ಮತ್ತು ಯಥರ್ವ್‌ಗೆ ಪತ್ರವನ್ನು ಕೂಡ ಬುಜ್ಜಿ ಬರೆದಿದೆ. ಅದರಲ್ಲೇನಿದೆ? “ಹಾಯ್ ಆಯ್ರಾ & ಯಥರ್ವ್.. ನಾನು ಬುಜ್ಜಿ.. ನಾನು ಭೈರವನ (ಪ್ರಭಾಸ್) ಬೆಸ್ಟ್ ಫ್ರೆಂಡ್. ಈಗ ನಿಮ್ಮ ಜೊತೆಗೂ ಇರಲಿದ್ದೇನೆ. ಬುಜ್ಜಿ ಎಂದರೆ ಚಿಕ್ಕವರು ಎಂದರ್ಥ. ಆದರೆ ನಾನು ಸಿನಿಮಾದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಜೂನ್ 27ರಂದು ನಿಮ್ಮನ್ನೆಲ್ಲಾ ಥಿಯೇಟರ್‌ನಲ್ಲಿ ಮೀಟ್ ಮಾಡಲು ನಾನು ಕಾಯುತ್ತಿದ್ದೇನೆ” ಎಂದು ಪತ್ರದಲ್ಲಿ ಬರೆಯಲಾಗಿದೆ.
ಇನ್ನು, ಈ ಗಿಫ್ಟ್‌ಗೆ ಪ್ರತಿಯಾಗಿ ತಮ್ಮ ತಮ್ಮ ಕೈಯಾರೆ ‘ಥ್ಯಾಂಕ್ ಯೂ ಬುಜ್ಜಿ..’ ಎಂದು ಬರೆದಿದ್ದಾರೆ ಯಶ್ ಮಕ್ಕಳಾದ ಆಯ್ರಾ ಮತ್ತು ಯಥರ್ವ್. ಈ ಉಡಗೊರೆ ಮತ್ತು ಥ್ಯಾಂಕ್ಸ್ ಲೆಟರ್ ಅನ್ನು ಫೋಟೋ ಕ್ಲಿಕ್ ಮಾಡಿ ಹಂಚಿಕೊಂಡಿರುವ ನಟಿ ರಾಧಿಕಾ ಪಂಡಿತ್, “ಕಲ್ಕಿ 2989 ಎಡಿ ಸಿನಿಮಾ ಶುಭವಾಗಲಿ…” ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಬುಜ್ಜಿ ಎಂಬ ಫ್ಯಾನ್ಸಿ ಕಾರಿಗೆ ನಟಿ ಕೀರ್ತಿ ಸುರೇಶ್ ಅವರು ಧ್ವನಿ ನೀಡಿರುವುದು ವಿಶೇಷ.
ಸುಮಾರು 600 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿರುವ ‘ಕಲ್ಕಿ 2898 ಎಡಿ’ ಸಿನಿಮಾವನ್ನು ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಹೀರೋ ಆಗಿದ್ದರೆ, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಅವರಂತಹ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಜೂನ್ 27ರಂದು ಬಹುಭಾಷೆಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ತೆರೆಗೆ ಬರಲಿದೆ

Comments (0)

Your email address will not be published. Required fields are marked *

Back to top button