Freedom TVಸಿನಿಮಾ

ಅಧಿಕಾರ ಶಾಶ್ವತವಲ್ಲ ಪ್ರೀತಿ ವಿಶ್ವಾಸ ಶಾಶ್ವತ; ಸುಮಲತಾ ಅಂಬರೀಶ್

ಮಂಡ್ಯ : ಅಧಿಕಾರ ಶಾಶ್ವತ ಅಲ್ಲ ಮಂಡ್ಯ ಜನರ ಪ್ರೀತಿ ಶಾಶ್ವತ,ನಿಮ್ಮ ಸಹಕಾರ ಆಶೀರ್ವಾದ ಎಂದೆಂದಿಗೂ ಇರಲಿ‌ ಎಂದು ಸಂಸದೆ ಸುಮಲತಾ ಅಂಬರೀಶ್ ಆಶಯ ವ್ಯಕ್ತಪಡಿಸಿದರು.

ನಗರದ ರೈತ ಸಭಾಂಗಣದಲ್ಲಿ ಡಾ ಅಂಬರೀಶ್ ಫೌಂಡೇಷನ್, ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿ ಗಳ ಸಂಘದ ಸಹಯೋಗ ದಲ್ಲಿ ನಡೆದ ನಟ ಹಾಗೂ ಮಾಜಿ ಕೇಂದ್ರ ಸಚಿವ ಅಂಬರೀಶ್ ರವರ 72 ನೇ ಜನ್ಮ ಜಯಂತಿ,ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸಮರ್ಪಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಧಿಕಾರ ಯಾವತ್ತು ಶಾಸ್ವತ ಅಲ್ಲ. ಸಂಸದೆ ಸ್ಥಾನ ಹೋದರು ಸಹ ಜಿಲ್ಲೆಯ ಸೊಸೆ ಪಟ್ಟ ಶಾಶ್ವತ ವಾದ್ದು ಇಂತಹ ಸೌಭಾಗ್ಯ ನನ್ನ ಬಿಟ್ಟು ಹೋಗಲ್ಲ. ರಾಜಕಾರಣ ದಲ್ಲಿ ಏನೋ ಆಗಬೇಕು ಅಂತ ರಾಜಕಾರಣಕ್ಕೆ ಬಂದಿಲ್ಲ. ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ, ರಾಜಕಾರಣ ದಲ್ಲಿ ಇರಲಿ ಇಲ್ಲದಿರಲಿ ಮಂಡ್ಯ ಜಿಲ್ಲೆಯ ಜನರ ಸಂಬಂಧ ನಿರಂತರ ವಾಗಿರಲಿದೆ ಎಂದು ಹೇಳಿದರು.

ಮನೆ ಮನೆಯಲ್ಲಿ ವ್ಯಕ್ತಿ ಜನಿಸೋದು ಸಾಮಾನ್ಯ ಆದರೆ ವ್ಯಕ್ತಿತ್ವ ಇರುವ ವ್ಯಕ್ತಿ ಜನಿಸಿವುದು ಅಪರೂಪ ಅಂಬರೀಶ್ ಅದನ್ನ ಪಡೆದುಕೊಂಡು ಬಂದವರು. ನನಗಿಂತ ಮಂಡ್ಯ ಜಿಲ್ಲೆಯ ಜನರಿಗೆ ಅವರ ಬಗ್ಗೆ ಗೊತ್ತಿದೆ. ಅವರ ಆಶಯ ಮುಂದುವರಿಸಲು ಡಾ.ಅಂಬರೀಶ್ ಫೌಂಡೇಶನ್ ಸ್ಥಾಪನೆ ಮಾಡಿದ್ದೇವೆ. ಫೌಂಡೇಶನ್ ಮೂಲಕ ಸಮಾಜಮುಖಿ ಕೆಲಸ ಮಾಡಲು ಇಚ್ಚಿಸಿದ್ದೇವೆ, ಕಷ್ಟ ದಲ್ಲಿರುವವರಿಗೆ ಸಹಾಯಮಾಡಲು ಮುಂದಾಗಿದ್ದೇವೆ ಇಂತಹ ಸಂಧರ್ಭದಲ್ಲಿ ಬೆಲೂರು ಸೋಮಶೇಖರ್ ಬಗ್ಗೆ ಮಾತನಾಡದಿದ್ರೆ ತಪ್ಪಾಗುತ್ತೆ ಈಎಲ್ಲಾ ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ  ಎಂದು ಹೇಳಿದರು.

Comments (0)

Your email address will not be published. Required fields are marked *

Back to top button