ಸಿನಿಮಾಸುದ್ದಿ

ಕಲರ್ಸ್ ಕನ್ನಡದಲ್ಲಿ ಇದ್ದಕ್ಕಿದ್ದಂತೆಯೇ ‘ಕಿಚ್ಚ’ ಸುದೀಪ್‌ ಪ್ರತ್ಯಕ್ಷ; ಕಾರಣ ಏನಿರಬಹುದು?

ಬೆಂಗಳೂರು: ನಟ ‘ಕಿಚ್ಚ’ ಸುದೀಪ್ ಅವರು ಕಳೆದ ಕೆಲ ದಿನಗಳವರೆಗೂ ‘ಮ್ಯಾಕ್ಸ್’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದರು. ಇನ್ನು, ‘ಬಿಗ್ ಬಾಸ್‌’ ಕನ್ನಡ ಶೋ ಕೂಡ ಮುಗಿದು ಮೂರ್ನಾಲ್ಕು ತಿಂಗಳಾಗಿದ್ದು, ಅದಾದ ಬಳಿಕ ಕಿಚ್ಚ ಸುದೀಪ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಅವರು ಕಲರ್ಸ್ ಕನ್ನಡ ವಾಹಿನಿಯ ದೊಡ್ಡ ಇವೆಂಟ್‌ವೊಂದರಲ್ಲಿ ಕಾಣಿಸಿಕೊಂಡು, ಫ್ಯಾನ್ಸ್‌ಗೆ ಶಾಕ್ ನೀಡಿದ್ದಾರೆ.

ಏನಿದು ಇವೆಂಟ್?

ಕೋಟ್ಯಂತರ ವೀಕ್ಷಕರಿಗೆ ‘ಕೋಟಿ’ ಮನರಂಜನೆ! ಹೌದು, ಕಲರ್ಸ್ ಕನ್ನಡ ವಾಹಿನಿಯು ಈ ಹೆಸರಿನಲ್ಲೊಂದು ಇವೆಂಟ್ ಮಾಡಿದೆ. ಆ ಅದ್ದೂರಿ ಕಾರ್ಯಕ್ರಮವು ಇದೇ ಜೂನ್ 2ರಂದು ಸಂಜೆ 7.30ಕ್ಕೆ ಪ್ರಸಾರವಾಗಲಿದೆ. ವಿಶೇಷವೆಂದರೆ, ಈ ಕಾರ್ಯಕ್ರಮದ ಹೈಲೈಟ್ ಎಂದರೆ ಅದು ‘ಕಿಚ್ಚ’ ಸುದೀಪ್. ಹೌದು, ‘ಕೋಟಿ’ ಮನರಂಜನೆ ವೇದಿಕೆ ಮೇಲೆ ಗ್ರ್ಯಾಂಡ್ ಎಂಟ್ರಿ ನೀಡಿ, ಫ್ಯಾನ್ಸ್‌ಗೆ ಥ್ರಿಲ್ ನೀಡಿದ್ದಾರೆ ಸುದೀಪ್. ಇಲ್ಲಿ ಇನ್ನೂ ವಿಶೇಷವೆಂದರೆ, ಕಿಚ್ಚ ಸುದೀಪ್ ಅವರ ಹೇರ್‌ಸ್ಟೈಲ್ ಕೂಡ ಚೇಂಜ್ ಆಗಿದೆ. ಅದು ಫ್ಯಾನ್ಸ್‌ಗೆ ಇನ್ನಷ್ಟು ಖುಷಿ ನೀಡಿದೆ.

‘ಡಾಲಿ’ಗೆ ಸಿಕ್ತು ಕಿಚ್ಚನ ಹಾರೈಕೆ

‘ಡಾಲಿ’ ಧನಂಜಯ್ ಅವರು ‘ಕೋಟಿ’ ಸಿನಿಮಾದಲ್ಲಿ ನಟಿಸಿದ್ದು, ಇದನ್ನು ನಿರ್ದೇಶನ ಮಾಡಿರುವುದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾಗಿದ್ದ ಪರಮೇಶ್ವರ್ ಗುಂಡ್ಕಲ್‌ ಅವರು. ‘ಕೋಟಿ’ ಸಿನಿಮಾದ ಮೂಲಕ ತಮ್ಮ ಸಿನಿಮಾ ನಿರ್ದೇಶನದ ಕನಸನ್ನು ಪರಮ್ ನನಸು ಮಾಡಿಕೊಂಡಿದ್ದಾರೆ. ಜೂನ್ 14ರಂದು ಈ ಸಿನಿಮಾ ತೆರೆಗೆ ಬರುತ್ತಿದ್ದು, ಆ ಹಿನ್ನೆಲೆಯಲ್ಲಿ ಕೋಟಿ ಮನರಂಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಾಗಾಗಿ, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಆಗಮಿಸಿದ್ದರು.

ಸದ್ಯ ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರೋಮೋದಲ್ಲಿ ‘ಕಿಚ್ಚ’ ಸುದೀಪ್ ಅವರನ್ನು ಗ್ರ್ಯಾಂಡ್ ಆಗಿ ವೇದಿಕೆ ಮೇಲೆ ಕರೆತರಲಾಗಿದೆ. ನಂತರ ನಟ ಧನಂಜಯ್ ಅವರು ಕಿಚ್ಚನನ್ನು ತಬ್ಬಿಕೊಂಡಿದ್ದಾರೆ. ಡಾಲಿಗೆ ಪ್ರೀತಿಯ ಅಪ್ಪುಗೆ ನೀಡಿರುವ ನಟ ಸುದೀಪ್ ಅವರು, ‘ಕೋಟಿ’ ಟೀಮ್‌ಗೆ ಒಳ್ಳೆದಾಗಲಿ ಎಂದು ಹಾರೈಸಿದ್ದಾರೆ.

ಈ ಇವೆಂಟ್‌ನಲ್ಲಿ ಯಾರೆಲ್ಲಾ ಇದ್ರು?

‘ಕೋಟಿ’ ಸಿನಿಮಾದ ಹೀರೋ ಧನಂಜಯ್, ನಟಿ ತಾರಾ, ರಂಗಾಯಣ ರಘು, ‘ಪದವಿ ಪೂರ್ವ’ ಸಿನಿಮಾ ಖ್ಯಾತಿಯ ನಟ ಪೃಥ್ವಿ ಶಾಮನೂರು, ಚಿತ್ರದ ನಾಯಕಿ ಮೋಕ್ಷಾ ಕುಶಾಲ್, ರಮೇಶ್ ಇಂದಿರ, ಯೋಗರಾಜ್ ಭಟ್ ಮುಂತಾದವರು ಇದ್ದರು.

ಭರ್ಜರಿ ಮನರಂಜನಾ ಕಾರ್ಯಕ್ರಮ

ಇನ್ನು, ಈ ಶೋನಲ್ಲಿ ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಮಹೇಶ್ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಅವರಿಗೆ ಸಾಥ್ ನೀಡಿರುವುದು ನಟಿ ನಮ್ರತಾ ಗೌಡ, ವಾಸುಕಿ ವೈಭವ್ ಹಾಡು ಹೇಳಿದ್ದರೆ, ನಟಿ ಅಂಕಿತಾ ಅಮರ್ ಕೂಡ ಡ್ಯಾನ್ಸ್ ಮಾಡಿದ್ದಾರೆ. ಅಕುಲ್ ಬಾಲಾಜಿ ಈ ಇವೆಂಟ್ ಅನ್ನು ನಡೆಸಿಕೊಟ್ಟಿದ್ದಾರೆ. ಅಂದಹಾಗೆ, ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್‌ ಸಂಸ್ಥೆ ನಿರ್ಮಾಣ ಮಾಡಿದೆ. ಈ ಬ್ಯಾನರ್ ಅಡಿಯಲ್ಲಿ ಕನ್ನಡದಲ್ಲಿ ಸಿದ್ಧಗೊಂಡಿರುವ ಮೊದಲ ಸಿನಿಮಾ ಕೋಟಿ ಅನ್ನೋದು ವಿಶೇಷ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button