
ಬಾಗಲಕೋಟೆ : ಆರ್‌ಸಿಬಿ ತಂಡದ ಅಭಿಮಾನಿಯೊಬ್ಬ ರಕ್ತದಲ್ಲಿ ಕೋಹ್ಲಿ ಚಿತ್ರ ಬಿಡಿಸಿದ್ದಾನೆ. ಬಾಗಲಕೋಟೆ ಜಿಲ್ಲೆಯ ರನ್ನಬೆಳಗಲಿಯ ಚಿತ್ರಕಲಾವಿದ ಶಿವಾನಂದ ನೀಲನ್ನವರ ರನ್ನಬೆಳಗಲಿಯ ಎಸ್‌ಸಿಪಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಅವರೇ ತಮ್ಮ ಕೈಯಾರೆ ಅದ್ಭುತವಾದತಂಹ ರೀತಿಯಲ್ಲಿ ಕೊಹ್ಲಿಯ ಚಿತ್ರ ಬಿಡಿಸಿದ್ದಾರೆ.

ಇತ್ತೀಚಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದು ಬೀಗಿದ ಹಿನ್ನೆಲೆಯಲ್ಲಿ, ರನ್ನಬೆಳಗಲಿಯ ಚಿತ್ರಕಲಾವಿದನಿಂದ ರಕ್ತದಲ್ಲೇ ಕೊಹ್ಲಿ ಭಾವಚಿತ್ರ ಮೂಡಿಬಂದಿದೆ. ಎಸ್‌ಸಿಪಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಶಿವಾನಂದ ನೀಲನ್ನವರ ಸ್ವತಃ ತನ್ನ ರಕ್ತದಲ್ಲೇ ಕುಂಚ ಅದ್ದಿ ವಿರಾಟ್ ಕೊಹ್ಲಿ ಭಾವಚಿತ್ರ ಬಿಡಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ. ಕೋಹ್ಲಿಗೆ ಸಮರ್ಪಿಸಿದ ಆರ್‌ಸಿಬಿ ಭಕ್ತನ ಈ ರಕ್ತಚಿತ್ರ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.





