ಕ್ರಿಕೆಟ್ಸುದ್ದಿ

ಆರ್​ಸಿಬಿ ಗೆದ್ದ ತಕ್ಷಣ ಮೈದಾನದಲ್ಲೇ ಕಣ್ಣೀರಿಟ್ಟ ಕೊಹ್ಲಿ: ಅನುಷ್ಕಾ ಕಣ್ಣಲ್ಲೂ ಬಂತು ನೀರು

ಬೆಂಗಳೂರು : ಐಪಿಎಲ್ 2024ರ ಪ್ಲೇಆಫ್‌ಗಳ ನಾಲ್ಕು ತಂಡಗಳನ್ನು ನಿರ್ಧರಿಸಲಾಗಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಪ್ಲೇಆಫ್ ಟಿಕೆಟ್ ಕಾಯ್ದಿರಿಸಿದೆ. ಪ್ಲೇಆಫ್ ತಲುಪಲು, ಆರ್​ಸಿಬಿ ಸಿಎಸ್​ಕೆ ವಿರುದ್ಧದ ಪಂದ್ಯವನ್ನು ಕನಿಷ್ಠ 18 ರನ್ ಅಥವಾ 11 ಎಸೆತಗಳಿಂದ ಗೆಲ್ಲಬೇಕಿತ್ತು. ಈ ಪಂದ್ಯವನ್ನು ಆರ್‌ಸಿಬಿ 27 ರನ್‌ಗಳಿಂದ ಗೆದ್ದುಕೊಂಡಿತು. ಮೊದಲ 7 ಪಂದ್ಯಗಳ ಬಳಿಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್​ಸಿಬಿ ಈ ರೀತಿ ಕಮ್​ಬ್ಯಾಕ್ ಮಾಡುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಪ್ಲೇಆಫ್ ತಲುಪಿದ ಸಂದರ್ಭ ತಂಡದ ಆಟಗಾರರು ಅದ್ಧೂರಿಯಾಗಿ ಸಂಭ್ರಮಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ ಭಾವುಕರಾದರು.

ಸಿಎಸ್‌ಕೆಗೆ ಅರ್ಹತೆ ಪಡೆಯಲು ಕೊನೆಯ ಓವರ್‌ನಲ್ಲಿ 17 ರನ್‌ಗಳು ಬೇಕಾಗಿದ್ದವು. ಇದು ಚೆನ್ನೈ ಪರ ಆಗುತ್ತೆ ಎಂದೇ ನಂಬಲಾಗಿತ್ತು. ಯಾಕೆಂದರೆ ಕ್ರೀಸ್​ನಲ್ಲಿದ್ದಿದ್ದು ಎಂಎಸ್ ಧೋನಿ. ಅದರಂತೆ ಧೋನಿ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಆದಾಗ್ಯೂ, ಅವರು ಎರಡನೇ ಎಸೆತದಲ್ಲಿ ಯಶ್ ದಯಾಲ್‌ ಬೌಲಿಂಗ್​ನಲ್ಲಿ ಧೋನಿ (13 ಎಸೆತಗಳಲ್ಲಿ 25 ರನ್ ) ನಿರ್ಗಮಿಸಿದರು. ದಯಾಳ್ ಅದ್ಭುತ ಕಮ್​ಬ್ಯಾಕ್ ಮಾಡಿದರು. ಆರ್​ಸಿಬಿ ಊಹಿಸಲಾದ ರೀತಿಯಲ್ಲಿ ಗೆಲುವು ಸಾಧಿಸಿತು. ಏತನ್ಮಧ್ಯೆ, ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆದ ನಂತರ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ವೈರಲ್ ಆಗಿದೆ.

Comments (0)

Your email address will not be published. Required fields are marked *

Back to top button