ಮನರಂಜನೆ

ಉಮಾಶ್ರೀ ಅವರ ಈ ದೃಶ್ಯಕ್ಕೆ  ಕೋಟಿ ಕೋಟಿ ನಮನ ಅಂತಿದ್ದಾರೆ ಫ್ಯಾನ್ಸ್‌!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸದ್ಯ ಸಹನಾ ಮೃತಪಟ್ಟಿದ್ದಾಳೆ. ಸಹನಾ ಅಂತ್ಯಕ್ರಿಯೆಯ ದೃಶ್ಯ ಪ್ರೇಕ್ಷಕರಲ್ಲಿ ಕಣ್ಣೀರು ತರಸಿವಂತೆ ಇತ್ತು.ಮಗಳನ್ನು ಕಳೆದುಕೊಂಡ ಪುಟ್ಟಕ್ಕ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, ಅವರ ಅದ್ಭುತ ನಟನೆ ನೋಡಿ ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ.

ಹಿರಿಮಗಳು ಸಹನಾಳನ್ನು ಕಳೆದುಕೊಂಡ ಪುಟ್ಟಕ್ಕನ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಒಂದು ಸಲ ʻʻಓ ಅನ್ನು ಮಗಳೆ, ನಾನೇ ಪಾಪಿ, ಆ ಮಗುನ ಅತ್ತೆ ಮನೆಗೆ ಹೋಗು ಹೋಗು ಅಂತ ಹೇಳಿ ಈಗ ನಾನೇ ಆ ಮಗುವ ಬೆಂಕಿಗೆ ಹಾಕಿದೆʼʼ ಎಂದು ಎದೆ ಬಡಿದುಕೊಂಡು ಅಳುತ್ತಿದ್ದಾಳೆ ಪುಟ್ಟಕ್ಕ. ಉಮಾಶ್ರೀ ಅವರ ಈ ದೃಶ್ಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

Comments (0)

Your email address will not be published. Required fields are marked *

Back to top button