Tuesday, June 24, 2025
26.6 C
Bengaluru
Google search engine
LIVE
ಮನೆಸಿನಿಮಾಮೇ ಹತ್ತರಂದು ಮರು ಬಿಡುಗಡೆಯಾಗಲಿದೆ ಪುನೀತ್ ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ

ಮೇ ಹತ್ತರಂದು ಮರು ಬಿಡುಗಡೆಯಾಗಲಿದೆ ಪುನೀತ್ ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ

ಬೆಂಗಳೂರು: ಎಂ.ಎನ್.ಕೆ‌ ಮೂವೀಸ್ ಲಾಂಛನದಲ್ಲಿ ಎಂ.ಎನ್ ಕುಮಾರ್ ನಿರ್ಮಿಸಿ, ಎ.ಹರ್ಷ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ಅವರು ನಾಯಕರಾಗಿ ನಟಿಸಿದ್ದ ಸೂಪರ್ ಹಿಟ್ ಚಿತ್ರ ” ಅಂಜನಿಪುತ್ರ” ಮೇ 10 ರಂದು ಮರು ಬಿಡುಗಡೆಯಾಗುತ್ತಿದೆ. ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ಮರು ಬಿಡುಗಡೆ(ರೀ ರಿಲೀಸ್) ಮಾಡುತ್ತಿರುವುದಾಗಿ ನಿರ್ಮಾಪಕ‌ ಎಂ ಎನ್ ಕುಮಾರ್ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಪುನೀತ್ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ರವಿ ಬಸ್ರೂರ್ ಅವರ‌ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದ “ಬಾರಿ ಖುಷಿ ಮಾರೆ ನಂಗೆ” ಸೇರಿದಂತೆ ಎಲ್ಲಾ ಹಾಡುಗಳು‌ ಜನಪ್ರಿಯವಾಗಿದೆ. ಬೇಸಿಗೆ ರಜೆಯ ಈ ಸಮಯದಲ್ಲಿ ಸೂಪರ್ ಹಿಟ್ “ಅಂಜನಿ ಪುತ್ರ” ಚಿತ್ರವನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡಲು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments