Freedom TV

ಕಾಂಗ್ರೆಸ್ ಗ್ಯಾರೆಂಟಿಗಳಿಗೆ ತಡೆದುಕೊಳ್ಳಲಾಗದೆ ಕುಮಾರಸ್ವಾಮಿ ಈ ರೀತಿ ಮಾತನಾಡುತ್ತೀದ್ದಾರೆ : ಶಾಸಕ ಎಸ್.ಆರ್ ಶ್ರೀನಿವಾಸ್

ತುಮಕೂರು: ಸೋಲುತ್ತೇವೆಂಬ ಹತಾಶ ಮನೋಭಾವದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೀಗೆ ಮಾತನಾಡುತ್ತಿದ್ದಾರೆ ಅವರ ಮನಸ್ಥಿತಿಯೇ ಆಗಿದೆ ಎಂದು ಗುಬ್ಬಿ ಶಾಸಕ ಎಸ್,ಆರ್ ಶ್ರೀನಿವಾಸ್ ಹೇಳಿದರು.

ತಾಲೂಕಿನ ಮಾದಾಪುರ ಗ್ರಾಮದ ಶ್ರೀ ಮಣ್ಣಮ್ಮ ದೇವಿಗೆ ಪೂಜೆ ಸಲ್ಲಿಸುವ ಮೂಲಕ ತುಮಕೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮುದ್ದನುಮೇಗೌಡ ಪರ ಪ್ರಚಾರ ಕೈಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು ಅವರು, ಕುಮಾರಸ್ವಾಮಿಯವರು ಈ ಹಿಂದೆಯೂ ಸಹ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಬೇಕಾದರೆ ಇಷ್ಟು ದಿನ ಎಲ್ಲಿ ಮಲಗಿದ್ದೆಯಮ್ಮ ಎಂದು ಕೇಳಿದರು ಅವರ ಮನಸ್ಥಿತಿಯೇ ಆಗಿದೆ ಕಾಂಗ್ರೆಸ್ ನೀಡಿರುವ ಗ್ಯಾರೆಂಟಿಗಳಿಗೆ ತಡೆದುಕೊಳ್ಳಲಾಗದೆ ಎಲ್ಲಿ ಸೋಲುತ್ತೇವೆ ಎಂಬ ಹತಾಶ ಮನೋಭಾವದಿಂದ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ದೇವೇಗೌಡರು ಹೇಮಾವತಿ ನೀರಿಗೆ ಅಡ್ಡಿಪಡಿಸುತ್ತಾರೆ ಎಂದು ಹೇಳಿಕೊಂಡು ಸಂಸದ ಬಸವರಾಜು ಮತ್ತು ಸೋಮಣ್ಣ, ದೇವೇಗೌಡರಿಗೆ ವೋಟ್ ಹಾಕಬೇಡಿ ಎಂದು ಹೇಳಿದ್ದರು ಎಂದು ಎಸ್,ಆರ್ ಶ್ರೀನಿವಾಸ್ ತಿಳಿಸಿದರು .

 

Comments (0)

Your email address will not be published. Required fields are marked *

Back to top button