ಸಿನಿಮಾಸುದ್ದಿ

ಕಿರುತರೆ ನಟ ಪ್ರದೀಪ್ ನಿಧನ

ಬೆಂಗಳೂರು: ಕಿರುತೆರೆ ನಟ ರಂಗಭೂಮಿ ಕಲಾವಿದ ಪ್ರದೀಪ್ ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ 10 ದಿನಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾಗಿದ್ದ ಪ್ರದೀಪ್ ಸುಬ್ಬರಾಮು ಅವರು ಭಾನುವಾರ ಸಂಜೆ ಮತ್ತೆ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದ್ದಾರೆಂದು ಕುಟುಂಬದವರು ತಿಳಿಸಿದರು.

ರಂಗಭೂಮಿ ಮತ್ತು ಕಿರುತೆರೆ ನಟಿಯಾಗಿರುವ ಪತ್ನಿ ಕಲ್ಯಾಣಿ ಹಾಗೂ ಇಬ್ಬರು ಪುತ್ರಿಯರನ್ನು ಬಿಟ್ಟು ಅವರು ಅಗಲಿದ್ದಾರೆ. ಬೆಂಗಳೂರಿನ ಹಲವು ರಂಗತಂಡಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ತೊಡಗಿಸಿಕೊಂಡಿದ್ದ ಪ್ರದೀಪ್ ಅವರು ತಮ್ಮ ಅದ್ಭುತ ನಟನೆಯಿಂದ ರಂಗಾಸಕ್ತರ ಗಮನ ಸೆಳೆದಿದ್ದರು.

Comments (0)

Your email address will not be published. Required fields are marked *

Back to top button