ರಾಜಕೀಯರಾಜ್ಯಸುದ್ದಿ

ಮೋದಿಯವರು ಈ ಬಾರಿ‌ಯೂ ಪ್ರಧಾನಿಯಾಗಲಿದ್ದಾರೆ – ಪ್ರಹ್ಲಾದ ಜೋಶಿ

ಹುಬ್ಬಳ್ಳಿ : ಪ್ರಧಾನಿ ಮೋದಿಯವರು ಈ ಬಾರಿಯೂ ಬಹುಮತದೊಂದಿಗೆ ಪ್ರಧಾನಿಯಾಗಲಿದ್ದಾರೆ ಎಂದು ಪ್ರಹ್ಲಾದ್​ ಜೋಶಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವಧಿಯಲ್ಲಿ ನಿಗದಿತ ರೇಷಿಯೋ ಮೀರಿ ಸಾಲ‌ ಮಾಡಲಾಗಿದೆ. ಆದರೆ ಕೇಂದ್ರದ ಸಾಲದ ಬಗ್ಗೆ ಮಾತನಾಡುತ್ತಾರೆ. ಅವರು ಮೊದಲು ತಮ್ಮ ಅವಧಿಯಲ್ಲಿ ಮಾಡಲಾಗಿರುವ ನಿಯಮ ಬಾಹಿರ ಸಾಲದ‌ ಬಗ್ಗೆ ಮಾತನಾಡಲಿ. ಕೇಂದ್ರದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸಾಲ‌ ಮಾಡಿಲ್ಲ ಎಂದರು.

ದೇಶದಲ್ಲಿ ಬಿಜೆಪಿ‌ ಪರ‌ ಭಾರಿ ಅಲೆ ಇದೆ, ಮೋದಿಯವರು ಈ ಬಾರಿ‌ ಸಹ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸದಿಂದ ಮಾತನ್ನಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ‌ ಅಧಿಕಾರಕ್ಕೆ ಬರುವುದು ಶತಃ ಸಿದ್ದ ಎಂಬುದಾಗಿ ಪ್ರಹ್ಲಾದ ಜೋಶಿ ನಿಖರ ವಿಶ್ವಾಸವನ್ನು ಸಹ ನೀಡಿದ್ದಾರೆ.

ಈಶ್ವರಪ್ಪ ಪಕ್ಷದ‌ ಅಭ್ಯರ್ಥಿ ವಿರುದ್ದ ಸ್ಪರ್ಧಿಸುವುದಿಲ್ಲ. ಇನ್ನೂ ಸಮಯ ಇದೆ, ಎಲ್ಲವೂ ಸರಿ ಹೋಗಲಿದೆ. ಶಿವಮೊಗ್ಗ ಸೇರಿ ಎಲ್ಲೆಡೆ ಪಕ್ಷದಲ್ಲಿನ ಭಿನ್ನಮತ ಸರಿ‌ಹೋಗುವ ವಿಶ್ವಾಸವನ್ನ ಪ್ರಹ್ಲಾದ ಜೋಶಿ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button