ಸಿನಿಮಾಸುದ್ದಿ

ಕಿರುತೆರೆಗೆ ಕಾಲಿಟ್ಟ ‘ಕಾಟೇರ’ ನಿರ್ದೇಶಕ ತರುಣ್​ ಸುಧೀರ್​

ಬೆಂಗಳೂರು : ಕಾಟೇರ’ ದಂತಹಾ ಸೂಪರ್ ಹಿಟ್ ಸಿನಿಮಾ ನೀಡಿರುವ ನಿರ್ದೇಶಕ ತರುಣ್ ಸುಧೀರ್ ದಿಢೀರ್ ಎಂದು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ‘ಮಹಾನಟಿ’ ಹೆಸರಿನ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ತರುಣ್ ಸುಧೀರ್ ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ತರುಣ್ ಸುಧೀ‌ರ್ ಈ ರಿಯಾಲಿಟಿ ಶೋನ ತೀರ್ಪುಗಾರರಲ್ಲಿ ಒಬ್ಬರಾಗಿದ್ದು, ರಿಯಾಲಿಟಿ ಶೋನ ಪ್ರೋಮೋನಲ್ಲಿ ತರುಣ್ ಸುಧೀ‌ರ್ ಕಾಣಿಸಿಕೊಂಡಿದ್ದಾರೆ.

ಕೆಲವರಂತೂ ಕನ್ನಡದಲ್ಲಿ ಒಳ್ಳೆಯ ನಟಿಯರ ಕೊರತೆ ಇದೆಯೆಂಬ ಮಾತುಗಳನ್ನು ಆಗಾಗ್ಗೆ ಆಡುವುದುಂಟು. ಈ ಕೊರತೆಯನ್ನು ನೀಗಿಸಲೆಂದು ‘ಮಹಾನಟಿ’ ರಿಯಾಲಿಟಿ ಶೋ ಪ್ರಾರಂಭವಾಗಿದೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ ನಟಿಯಾಗುವ ಅರ್ಹತೆಯುಳ್ಳವರನ್ನು ಆರಿಸಿಕೊಂಡು ಬರಲಾಗಿದ್ದು, ರಿಯಾಲಿಟಿ ಶೋ ಮೂಲಕ ಒಬ್ಬ ‘ಮಹಾನಟಿ’ಯನ್ನು ಆಯ್ಕೆ ಮಾಡಲಾಗುತ್ತದೆ.

Comments (0)

Your email address will not be published. Required fields are marked *

Back to top button