ರಾಜಕೀಯರಾಜ್ಯಸುದ್ದಿ

6 ತಿಂಗಳಲ್ಲೇ ಹಿಂದಿ ಕಲಿತು ಭಾಷಣ ಮಾಡುತ್ತೇನೆ : ಕೋಟಾ ಶ್ರೀನಿವಾಸ ಪೂಜಾರಿ ಸವಾಲು ಸ್ವೀಕಾರ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಬ್ರಹ್ಮಾವರದಲ್ಲಿ ತಮ್ಮ ಚುನಾವಣಾ ಪ್ರಚಾರದ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡುವಾಗ, “ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕನ್ನಡ ಬಿಟ್ಟರೆ ಹಿಂದಿ ಅಥವಾ ಇಂಗ್ಲಿಷ್ ಬರುವುದಿಲ್ಲ. ಅವರನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ ಕೆಲಸಗಳಾಗುವುದಿಲ್ಲ” ಎಂಬ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.

ತಮ್ಮ ತಂದೆ ತಾಯಿ ಕೂಲಿ ಕಾರ್ಮಿಕರು ,ತನಗೆ ಹಿಂದೆ ಇಂಗ್ಲೀಷ್ ಬರಲ್ಲ ಅಂತಾ ಹಿರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಜನರು ನನಗೆ ಆಶೀರ್ವಾದ ಮಾಡಿದ್ದಲ್ಲಿ ಪಾರ್ಲಿಮೆಂಟ್ ನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ಚೀಕರಿಸುತ್ತೇನೆ. ಜೊತೆಗೆ ಆರೇ ತಿಂಗಳಲ್ಲಿ ಹಿಂದಿ ಕಲಿತು ಜಯಪ್ರಕಾಶ್ ಹೆಗ್ಡೆಯವರು ಇಷ್ಟಪಟ್ಟಂತೆ ಪಾರ್ಲಿಮೆಂಟ್ ನಲ್ಲಿ ಹಿಂದಿ ಭಾಷಣ ಮಾಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ

Comments (0)

Your email address will not be published. Required fields are marked *

Back to top button