ಕ್ರೈಂ ಸ್ಟೋರಿರಾಜ್ಯ

ಡೂಪ್ಲೀಕೇಟ್​​ ದುಬೈ ಕರೆನ್ಸಿ ಕೊಡ್ತಿದ್ದ ಆರೋಪಿ ಅರೆಸ್ಟ್

ಬೆಂಗಳೂರು : ಅರ್ಧ ಬೆಲೆಗೆ ದುಬೈ ಕರೆನ್ಸಿ ಕೊಡ್ತಿನಿ ಅಂತ ಕಲರ್ ಜೆರಾಕ್ಸ್ ಪೇಪರ್ ಕೊಡ್ತಿದ್ದ ಆರೋಪಿಯನ್ನು ಬಂಧನ ಮಾಡಲಾಗಿದೆ. ದೆಹಲಿ ಮೂಲದ ಇಮ್ರಾನ್ ಶೇಕ್ ಬಂಧಿತ ಆರೋಪಿಯಾಗಿದ್ದಾನೆ. ಈತನ ಜೋಡಿ ರುಕ್ಸಾನ ಎಸ್ಕೇಪ್ ಆಗಿದ್ದು ಸದ್ಯ ಈಕೆಗೂ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.


ಕಿಲಾಡಿಗಳು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ…!
ಕರೆನ್ಸಿ ಧಿರಾಮ್ ಎಂದು ನಂಬಿಸಿ ಕಲರ್ ಜೆರಾಕ್ಸ್ ಕೊಡುತ್ತಿದ್ದರು, ಉದ್ಯಮಿಗಳನ್ನ ಪರಿಚಯ ಮಾಡಿಕೊಳ್ಳುತ್ತಿದ್ದ ಕಿಲಾಡಿ ಜೋಡಿ, ನಮ್ಮ ಬಳಿ ಸಾಕಷ್ಟು ದುಬೈ ಕರೆನ್ಸಿ ಇದೆ ಆದರೆ ಕರೆನ್ಸಿಯನ್ನ ಎಕ್ಸ್ ಚೇಂಜ್ ಮಾಡೋದು ಕಷ್ಟ ಆಗುತ್ತಿದೆ. ಒಂದು ಧಿರಾಮ್ ಗೆ 22-25 ರೂಪಾಯಿ ಆಗುತ್ತೆ ಆದರೆ ಕಿಲಾಡಿಗಳು 12 ರೂಪಾಯಿ ಕೊಟ್ರೆ ಧಿರಾಮ್ ಕೊಡ್ತಿವಿ ಎಂದು ನಂಬಿಸುತ್ತಿದ್ದರು.


ಒಂದು ನೋಟು ಅಸಲಿ ಕೊಟ್ಟು ಯಾಮಾರಿಸುತ್ತಿದ್ದ ಕಿಲಾಡಿಗಳು..!!
ಉದ್ಯಮಿಗಳನ್ನು ನಂಬಿಸಲು ಒಂದು ಅಸಲಿ ಕರೆನ್ಸಿ ಕೊಟ್ಟು ಚೆಕ್ ಮಾಡಿಕೊಳ್ಳಿ ಅಂತ ಬಿಡ್ತಿದ್ರು, ಯಾಮಾರಿದವರು ಹಣ ರೆಡಿ ಮಾಡಿಕೊಂಡು ಕರೆನ್ಸಿ ಎಕ್ಸ್ ಚೇಂಜ್ ಗೆ ಮುಂದಾಗ್ತಿದ್ರು. ನಂತರ ಆರೋಪಿ ಶೇಕ್ ಹಣ ಪಡೆದು ಜೆರಾಕ್ಸ್ ನೋಟ್ ಕೈಗಿಟ್ಟು ಎಸ್ಕೇಪ್ ಆಗ್ತಿದ್ದ. ಸದ್ಯ ಆರೋಪಿ ಇಮ್ರಾನ್ ಶೇಕ್​​​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಮತ್ತೊರ್ವ ಆರೋಪಿ ಬಳಿ ಮತ್ತಷ್ಟು ನಕಲಿ ಕರೆನ್ಸಿ ಇರುವ ಸಾಧ್ಯತೆಯಿದೆ. ಸದ್ಯ ಅಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು ತನಿಖೆ ಮುಂದುವರೆಸಿದ್ದಾರೆ.

Comments (0)

Your email address will not be published. Required fields are marked *

Back to top button