ಸಿನಿಮಾಸುದ್ದಿ

ನಟಿ ಅರುಂಧತಿ ನಾಯರ್​ಗೆ ಅಪಘಾತ : ಸ್ಥಿತಿ ಗಂಭೀರ

ಹೈದ್ರಾಬಾದ್ : ನಟಿ ಅರುಂಧತಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರುಂಧತಿಗೆ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೆನ್ನೈನ ಕೋವಳಂ ಬೈಪಾಸ್ ಬಳಿ ಅಪಘಾತ ಸಂಭವಿಸಿದ್ದು, ನಟಿ ಆರೋಗ್ಯ ಪರಿಸ್ಥಿತಿ ಗಂಭಿರವಾಗಿದೆ. ತಾಯಿ ಜೊತೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಬೀಕರ ರಸ್ತೆ ಅಪಘಾತ ಸಂಭವಿಸಿದೆ.

ತಿರುವನಂತಪುರ ಅನಂತಪುರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಅರುಂಧತಿ ನಾಯರ್ ವೆಂಟಿಲೇಟರ್ ಸಹಾಯದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅರುಂಧತಿ ನಾಯರ್ ಆಪ್ತ ನಟಿ ಗೋಪಿಕಾ ಅನಿಲ್ ಅಭಿಮಾನಿಗಳು ಹಾಗೂ ಆಪ್ತರಿಂದ ಆರ್ಥಿಕ ನೆರವು ಕೇಳಿದ್ದಾರೆ. ಅರುಂಧತಿ ಕುಟುಂಬಕ್ಕೆ ಆಸ್ಪತ್ರೆ ದುಬಾರಿ ಪಾವತಿಸುವ ಆರ್ಥಿಕ ಶಕ್ತಿ ಹೊಂದಿಲ್ಲ. ಹೀಗಾಗಿ ಆರ್ಥಿಕ ನೆರವು ನೀಡುವಂತೆ ಗೋಪಿಕಾ ಅನಿಲ್ ಮನವಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button