ಸಿನಿಮಾಸುದ್ದಿ

ಅಪ್ಪು ಹುಟ್ಟುಹಬ್ಬ।।ಮುಂಬೈನಲ್ಲಿ ವಿಶೇಷ ಪೂಜೆ

ಅಪ್ಪು ಹುಟ್ಟಿದ ಹಬ್ಬದ ಪ್ರಯುಕ್ತ ಕರ್ನಾಟಕದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಇನ್ನೂ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಅಪ್ಪು ನೆನಪಿನಲ್ಲಿ ಮುಂಬೈನ ವಜ್ರೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಈ ದೇವಸ್ಥಾನವನ್ನು ವಜ್ರೇಶ್ವರಿ ಅಥವಾ ವಜ್ರ ಯೋಗಿನಿ ದೇವಸ್ಥಾನ ಎಂದೂ ಕರೆಯುತ್ತಾರೆ. ವಜ್ರ ಯೋಗಿನಿ ದೇವಾಲಾಯ ಜನಪ್ರಿಯ ದೇವಾಲಯ ,ಹಾಗಾದ್ರೆ ಅಲ್ಲಿನ ವಿಶೇಷತೆಗಳ ಬಗ್ಗೆ ತಿಳಿಯೋಣ ಬನ್ನಿ.

 

ಅಪ್ಪು ಜನುಮದಿನವನ್ನ ಅದ್ದೂರಿಯಾಗಿ ಕೊಂಡಾಡುತ್ತಿರುವ ಅಭಿಮಾನಿಗಳು ,ಇನ್ನೊಂದು ಕಡೆ ಅಶ್ವಿನಿ ಅವರು ಮುಂಬೈನ ವಿಶೇಷ ದೇವಾಲಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶ್ರೀ ವಜ್ರೇಶ್ವರಿ ಯೋಗಿನಿ ದೇವಿ ಮಂದಿರವು ವಜ್ರೇಶ್ವರಿ ದೇವಿಯನ್ನು ಪೂಜಿಸುವ ಹಿಂದೂ ದೇವಾಲಯ. ಮುಂಬೈನಿಂದ 75 ಕಿಮೀ ದೂರದಲ್ಲಿರುವ ವಜ್ರೇಶ್ವರಿ ಪಟ್ಟಣದಲ್ಲಿದೆ ಈ ದೇವಸ್ಥಾನ.

ಮೊದಲು ವಡ್ವಾಲಿ ಎಂದು ಕರೆಯಲ್ಪಡುತ್ತಿದ್ದ ಈ ನಗರವನ್ನು ಆ ನಂತರ ದೇವಾಲಯದ ಪ್ರಧಾನ ದೇವತೆಯ ಹೆಸರಿಟ್ಟು ವಜ್ರೇಶ್ವರಿ ಎಂದು ಮರುನಾಮಕರಣ ಮಾಡಲಾಯಿತು. ವಜ್ರೇಶ್ವರಿ ಪಟ್ಟಣವು ತಾನ್ಸಾ ನದಿಯ ದಡದಲ್ಲಿದೆ. ಇದು ಮಹಾರಾಷ್ಟ್ರ ಕೇಂದ್ರ ರೈಲ್ವೆ ಮಾರ್ಗದ ಸಮೀಪ ಥಾಣೆ ಜಿಲ್ಲೆಯ ಭಿವಂಡಿ ನಗರದಲ್ಲಿದೆ.
ದೇವಸ್ಥಾನವು ವಜ್ರೇಶ್ವರಿ ಪಟ್ಟಣದ ಅಂಚೆ ಕಛೇರಿಯ ಸಮೀಪದಲ್ಲಿದೆ. ಇದು ಜ್ವಾಲಾಮುಖಿ ಸ್ಫೋಟದಿಂದ ರೂಪುಗೊಂಡ ಮತ್ತು ಎಲ್ಲಾ ಕಡೆಗಳಲ್ಲಿ ಬೆಟ್ಟಗಳಿಂದ ಆವೃತವಾದ ಮಂದಗಿರಿ ಬೆಟ್ಟದ ಮೇಲಿರುವುದು ಇನ್ನೊಂದು ವಿಶೇಷ.

ಪುರಾಣಗಳು ವಡ್ವಾಲಿ ಪ್ರದೇಶವನ್ನು ವಿಷ್ಣು ದೇವರ ಅವತಾರಗಳಾದ ರಾಮ ಮತ್ತು ಪರಶುರಾಮರು ಭೇಟಿ ನೀಡಿದ ಸ್ಥಳವೆಂದು ಉಲ್ಲೇಖಿಸಿವೆ. ಅದತ ಪ್ರಕಾರ ಪರಶುರಾಮನು ವಡ್ವಾಲಿಯಲ್ಲಿ ಯಜ್ಞವನ್ನು ಮಾಡಿದ್ದು, ಆ ಪ್ರದೇಶದಲ್ಲಿನ ಜ್ವಾಲಾಮುಖಿ ಬೂದಿಯ ಅವಶೇಷಗಳೇ ಬೆಟ್ಟಗಳಾಗಿವೆ ಎನ್ನಲಾಗಿದೆ.

Comments (0)

Your email address will not be published. Required fields are marked *

Back to top button