ರಾಜಕೀಯರಾಜ್ಯಸುದ್ದಿ

ಪ್ರಧಾನಿ ಹುಬ್ಬಳ್ಳಿ ಪ್ರವಾಸ ಯಾವಾಗ..?

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಬ್ಬಳ್ಳಿ ಪ್ರವಾಸ ಮುಂದೂಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, 19 ಅಥವಾ 20ಕ್ಕೆ ಹುಬ್ಬಳ್ಳಿ ಪ್ರವಾಸ ಕೈಗೊಳ್ಳುವುದಿತ್ತು. ಆದರೆ, ಆ ದಿನಗಳಂದು ಬೇರೆ ರಾಜ್ಯಕ್ಕೆ ತೆರಳುವುದು ಮೊದಲೇ ಬುಕ್ ಆಗಿದೆ. ಹಾಗಾಗಿ ಹುಬ್ಬಳ್ಳಿ ಪ್ರವಾಸ ಮುಂದೂಡಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಅವರು ಇಂದು ಕಲ್ಬುರ್ಗಿ ಪ್ರವಾಸ ಕೈಗೊಂಡಿದ್ದಾರೆ. 18ಕ್ಕೆ ಶಿವಮೊಗ್ಗ ಪ್ರವಾಸವಿದೆ. ಎರಡನೇ ರಾಜ್ಯ ಪ್ರವಾಸ ಕೈಗೊಂಡ ವೇಳೆ ಹುಬ್ಬಳ್ಳಿ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

Comments (0)

Your email address will not be published. Required fields are marked *

Back to top button