
ಚಿತ್ರದುರ್ಗ: ಮದಕರಿ ನಾಡು, ವೀರವನಿತೆ ಓಬವ್ವನ ಬೀಡು ಚಿತ್ರದುರ್ಗ ಇಂದು “ರಾಜಾಹುಲಿ” ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವದ ಸುನಾಮಿಗೆ ಸಾಕ್ಷಿಯಾಯಿತು. ಮಾಜಿ ಸಿಎಂ ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣದ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ‘ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಜನಸಾಗರವೇ ಹರಿದುಬಂದಿದ್ದು, ಇಡೀ ಕೋಟೆನಾಡು ಕೇಸರಿಮಯವಾಗಿತ್ತು.


ಅಭಿಮಾನೋತ್ಸವದಲ್ಲಿ ಮಿಂದೆದ್ದ ಜನಸಾಗರ
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಉಪಸ್ಥಿತಿಯಲ್ಲಿ ನಡೆದ ಈ ಐತಿಹಾಸಿಕ ಸಮಾರಂಭದಲ್ಲಿ ಯಡಿಯೂರಪ್ಪ ಅವರ ಜೀವನಗಾಥೆಯನ್ನು ಸಾರುವ ಎರಡು ಪ್ರಮುಖ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ಅಮಿತ್ ಷಾ BSY ರವರ ಹೋರಾಟದ ಹಾದಿಯನ್ನು ಪರಿಚಯಿಸುವ ‘ಕೆಂಡಾವರೆ ಕಮಲ ಅರಳಿದ ಕಥೆ’ ಹಾಗೂ ‘ಸದನ ಶಿಕಾರಿ ಯಡಿಯೂರಪ್ಪನವರ ಗುಡುಗಿನ ನುಡಿಗಳು’ ಎರಡು ಕೃತಿಗಳನ್ನು ಬಿಡುಗಡೆ ಮಾಡಿದರು:
ಕೆಂಡಾವರೆ ಕಮಲ ಅರಳಿದ ಕಥೆ’ ಪುಸ್ತಕ ಅವರು ನಡೆದು ಬಂದ ಕಠಿಣ ಹಾದಿಯನ್ನು ವಿವರಿಸಿದರೆ ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರ ಗುಡುಗಿನ ನುಡಿಗಳು ಪುಸ್ತಕ ಅವರ ದಿಟ್ಟ ಭಾಷಣಗಳು ನೇರ ನುಡಿ ಹಾಗೂ ವಾಕ್ಪಟುತ್ವದ ಸಂಕಲನವನ್ನು ಹೊಂದಿರುವುದು ವಿಶೇಷ.
“ನಾನು ಹೋರಾಟದಿಂದ ಬಂದವನು, ಚಿನ್ನದ ಚಮಚದಿಂದಲ್ಲ” ಎನ್ನುತ್ತಾ ಬಿಎಸ್ ವೈ ಭಾವುಕರಾದರು. ವೇದಿಕೆಯಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು ಅತ್ಯಂತ ಭಾವುಕರಾಗಿ ತಮ್ಮ ಪಯಣವನ್ನು ಮೆಲುಕು ಹಾಕಿದರು. ಮಗನಾಗಿ ನಿಂತಿದ್ದೇನೆ: “ಇಂದು ನಾನು ಇಲ್ಲಿ ರಾಜಕಾರಣಿಯಾಗಿ ನಿಂತಿಲ್ಲ, ನಿಮ್ಮೆಲ್ಲರ ಮಗನಾಗಿ ನಿಂತಿದ್ದೇನೆ. ಈ ಜನಸಾಗರ ಮತ್ತು ನಿಮ್ಮ ಅಭಿಮಾನಕ್ಕೆ ನಾನು ಜನ್ಮ ಜನ್ಮಕ್ಕೂ ಋಣಿಯಾಗಿರುತ್ತೇನೆ.”
RSS ಸಂಸ್ಕಾರ: “ನನಗೆ ಸಂಸ್ಕಾರ ನೀಡಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS). ನಾನು ಯಾವತ್ತೂ ಸಿಎಂ ಆಗುವ ಕನಸು ಕಂಡವನಲ್ಲ, ಪುರಸಭೆ ಸದಸ್ಯನಿಂದ ಸಿಎಂ ಸ್ಥಾನದವರೆಗೆ ಜನರೇ ನನ್ನನ್ನು ಬೆಳೆಸಿದ್ದಾರೆ.”ಹೋರಾಟವೇ ಜೀವನ: “ನಾನು ಚಿನ್ನದ ಚಮಚ ಹಿಡಿದು ಬಂದವನಲ್ಲ, ನಿರಂತರ ಹೋರಾಟದಿಂದ ಬಂದವನು. ಅಕ್ಕಮಹಾದೇವಿ ಹುಟ್ಟಿದ ಶಿಕಾರಿಪುರದಿಂದ ಬಂದು ಭಾಗ್ಯಲಕ್ಷ್ಮಿ ಯೋಜನೆ, ಕೃಷಿ ಬಜೆಟ್ ತಂದಿದ್ದು ನನ್ನ ಜೀವನದ ದೊಡ್ಡ ಸಾರ್ಥಕತೆ.” ಎಂದರು.
ಅಮಿತ್ ಷಾ ಶ್ಲಾಘನೆ: “ದೇಶ ಕಂಡ ದಿಟ್ಟೆದೆಯ ಅಮಿತ್ ಷಾ ಅವರು ನನಗೆ ಮದಕರಿ ನಾಯಕರಂತೆ ಕಾಣುತ್ತಿದ್ದಾರೆ.ಅವರು ರಾಷ್ಟ್ರದ ಉಳಿವಿಗಾಗಿ ಮತ್ತು ಭಾರತವನ್ನು ವಿಶ್ವದ ಮೊದಲ ಸ್ಥಾನದಲ್ಲಿ ನಿಲ್ಲಿಸಲು ಶ್ರಮಿಸುತ್ತಿದ್ದಾರೆ.”ಕಡೆಯ ಉಸಿರಿರುವವರೆಗೆ ವಿಶ್ರಮಿಸಲ್ಲ ಎನ್ನುತ್ತಾ ತಮ್ಮ ನಿವೃತ್ತಿಯ ಬಗೆಗಿನ ಮಾತುಗಳಿಗೆ BSY ತೆರೆ ಎಳೆದರು. “ಐವತ್ತು ವರ್ಷ ನನ್ನನ್ನು ಬೆಳೆಸಿ ಸಲುಹಿದ್ದೀರಿ. ಕಡೆಯ ಉಸಿರಿರುವವರೆಗೂ ನಾನು ವಿರಮಿಸುವುದಿಲ್ಲ. ನಾಡು,ದೇಶ ಮತ್ತು ಪಕ್ಷಕ್ಕಾಗಿ ನಿರಂತರವಾಗಿ ದುಡಿಯುತ್ತೇನೆ. ಮುಂದಿನ ಹತ್ತು ವರ್ಷಗಳ ಕಾಲ ದೇಶವನ್ನು ಪ್ರಧಾನಿ ಮೋದಿ ಅವರೇ ಮುನ್ನಡೆಸಬೇಕು,” ಎಂದು ಕರೆ ನೀಡಿದರು.
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಸಂಭ್ರಮ ಹಾಗೂ ಅಭಿಮಾನೋತ್ಸವದ ಸಡಗರ ಚಿತ್ರದುರ್ಗದಲ್ಲಿ ಮೇಳೈಸಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದೆ.
#BSYAbhimanotsava #Yediyurappa #AmitShah #Chitradurga #BJP #Kendaavare #SadanaShikari #KarnatakaPolitics #FreedomTV #RajaHuli #Modi2029




