
ಐಪಿಎಲ್-2024 ಶುರುವಾಗಲು ಇನ್ನು ಕೆಲವೇ ದಿನ ಬಾಕಿಯಿದೆ. ಸದ್ಯ WPL- 2024 ಕ್ರೇಜ್ ಕಂಡುಬರ್ತಿದೆ. ಬೆಂಗಳೂರಲ್ಲಿ ಸೋಮವಾರ ನಡೆದ ಆರ್ಸಿಬಿ ಮತ್ತು ಯುಪಿ ವಾರಿಯರ್ಸ್ ನಡುವಣ ಪಂದ್ಯ ನೋಡೋಕೆ ಕ್ರಿಕೆಟ್ ಅಭಿಮಾನಿಗಳು ಮುಗಿಬಿದ್ದಿದ್ರು.
ಇಡೀ ಚಿನ್ನಸ್ವಾಮಿ ಸ್ಟೇಡಿಯಂ ಹೆಚ್ಚು ಕಡಿಮೆ ಫುಲ್ ಆಗಿತ್ತು. ಐಪಿಎಲ್ ಮ್ಯಾಚ್ ನೋಡುವಾಗ ಯಾವ ರೀತಿಯ ಕ್ರೇಜ್ ಇರುತ್ತೋ ಅದೇ ರೀತಿಯ ಕ್ರೇಜ್ ಕಂಡುಬಂತು.
ಆರ್ಸಿಬಿಯ ಸ್ಮೃತಿ ಮಂಧಾನಾ, ಎಲ್ಲಿಸ್ ಪೆರ್ರಿ ಸೂಪರ್ ಬ್ಯಾಟಿಂಗ್ಗೆ ಚಪ್ಪಾಳೆ, ವಿಶಲ್ಗಳ ಸುರಿಮಳೆಯೇ ಆಯ್ತು.. ಒಂದೊಂದು ಫೋರ್, ಸಿಕ್ಸರ್ಗೂ ಸ್ಟೇಡಿಯಂನಲ್ಲಿ ಸೇರಿದ್ದ ಕ್ರಿಕೆಟ್ ಅಭಿಮಾನಿಗಳು ಹುಚ್ಚೆದ್ದು ಸಂಭ್ರಮಿಸಿದರು.
ಆರ್ಸಿಬಿ ಗೆದ್ದ ಕ್ಷಣವಂತೂ ಸ್ಟೇಡಿಯಂನಲ್ಲಿ ಭಾರೀ ಸಂಭ್ರಮ ಕಂಡುಬಂತು.
https://twitter.com/CricCrazyJohns/status/1764862355312386497
WPL- 2024 ಮ್ಯಾಚ್ ಎಫೆಕ್ಟ್ ಚಿನ್ನಸ್ವಾಮಿ ಅಂಗಳದ ಹೊರಗೂ ಕಂಡುಬಂತು. ರಾತ್ರಿಯಾದ್ರೂ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಟ್ರಾಫಿಕ್ ಕಂಡುಬಂತು.
https://twitter.com/nabilajamal_/status/1764705678013456390
ಈ ದೃಶ್ಯಗಳನ್ನು ನೋಡ್ತಿದ್ರೆ ಐಪಿಎಲ್ ಮಾದರಿಯಲ್ಲೇ ಡಬ್ಲುಪಿಎಲ್ ಕೂಡ ಜನಪ್ರಿಯತೆ ಗಳಿಸಿದೆ ಎಂದೆನಿಸದೆ ಇರಲಿಲ್ಲ
https://twitter.com/wplt20/status/1764580780033130637




