Wednesday, June 25, 2025
28.6 C
Bengaluru
Google search engine
LIVE
ಮನೆ#Exclusive NewsTop Newsಇಸ್ರೇಲ್ ಮೇಲೆ ಕ್ಷಿಪಣಿ ದಾಳಿ - ಭಾರತೀಯನ ದುರ್ಮರಣ

ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ – ಭಾರತೀಯನ ದುರ್ಮರಣ

ಇಸ್ರೇಲ್ ಮೇಲೆ ಲೆಬನಾನ್​ ಭೂಭಾಗದಿಂದ ನಡೆದ ವಿಧ್ವಂಸಕ ಕ್ಷಿಪಣಿ ದಾಳಿಯಲ್ಲಿ ಭಾರತೀಯರೊಬ್ಬರು ಸಾವನ್ನಪ್ಪಿದ ಘಟನೆ ಇಸ್ರೇಲ್ ಉತ್ತರ ಗಡಿಯ ಮಾರ್ಗಲಿಯಟ್ ಎಂಬಲ್ಲಿ ನಡೆದಿದೆ. ಇಬ್ಬರು ಭಾರತೀಯರು ಗಾಯಗೊಂಡಿದ್ದಾರೆ.

ಮೃತರನ್ನು ಕೇರಳದ ಕೊಲ್ಲಂ ಮೂಲದ ನಿಬಿನ್ ಮ್ಯಾಕ್ಸ್​ವೆಲ್ ಎಂದು ಗುರುತಿಸಲಾಗಿದೆ. ಸದ್ಯ ನಿಬಿನ್ ಮ್ಯಾಕ್ಸ್​ವೆಲ್ ಮೃತದೇಹ ಸ್ಥಳೀಯ ಯಹೋದಿ ಆಸ್ಪತ್ರೆಯಲ್ಲಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳನ್ನು ಬುಷ್ ಜೋಸೇಫ್​ ಜಾರ್ಜ್, ಪೌಲ್ ಮೆಲ್ವಿನ್​ ಎಂದು ಗುರುತಿಸಲಾಗಿದೆ. ಪೌಲ್​ಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಭಾರತದಲ್ಲಿರುವ ಕುಟುಂಬಸ್ಥರ ಜೊತೆ ಪಾಲ್, ಜೋಸೇಫ್​ ಮಾತನಾಡಿದ್ದಾರೆ.

ವಿಧ್ವಂಸಕ ಕ್ಷಿಪಣಿ ದಾಳಿ ಹೆಜ್ಬುಲ್ಲಾ ಕೃತ್ಯ ಎಂದು ಶಂಕಿಸಲಾಗಿದೆ. ಹಮಾಸ್ ಬೆಂಬಲಿಸಿ ಈ ಗ್ರೂಪ್ ಅಕ್ಟೋಬರ್ 8ರಿಂದ ಉತ್ತರ ಇಸ್ರೇಲ್ ಮೇಲೆ ಆಗಾಗ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತೀಕಾರವಾಗಿ ಹೆಜ್ಬುಲ್ಲಾ ಸ್ಥಾವರಗಳ ಮೇಲೆ ಐಡಿಎಫ್​ ದಾಳಿ ನಡೆಸಿದೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments