Thursday, January 29, 2026
16.9 C
Bengaluru
Google search engine
LIVE
ಮನೆ#Exclusive NewsTop NewsBJP: ಬಿಜೆಪಿ ಮುಖಂಡನ ಮರ್ಡರ್ ಅಟೆಂಪ್ಟ್ ಡ್ರಾಮಾ..! ತಿರುಗುಬಾಣ

BJP: ಬಿಜೆಪಿ ಮುಖಂಡನ ಮರ್ಡರ್ ಅಟೆಂಪ್ಟ್ ಡ್ರಾಮಾ..! ತಿರುಗುಬಾಣ

ಬಿಜೆಪಿಯ ಹಿಂದೂ ಪ್ರಚಾರ ಸಮಿತಿ ಸದಸ್ಯನೊಬ್ಬ ತನ್ನ ಮೇಲೆ ಹತ್ಯೆ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಹೈಡ್ರಾಮಾ ಮಾಡಿದ್ದಾನೆ. ಕಡೆಗೆ ಪೊಲೀಸ್ ತನಿಖೆಯಲ್ಲಿ ಇದೆಲ್ಲಾ ಆತನದ್ದೇ ಸ್ಕೆಚ್​, ಡ್ರಾಮಾ ಎಂದು ಗೊತ್ತಾಗಿದೆ. ಈಗ ಆ ಬಿಜೆಪಿ ಜೈಲುಪಾಲಾಗಿದ್ದಾನೆ. ಈ ಘಟನೆ ನಡೆದಿರೋದು ತೆಲಂಗಾಣದ ಬೋಡುಪ್ಪಲ್​ನಲ್ಲಿ.

ಭಾಸ್ಕರ್ ಗೌಡ.. ಹೈದ್ರಾಬಾದ್- ಸಿಕಿಂದ್ರಾಬಾದ್​ನಲ್ಲಿ ಏಳು ಕ್ರಿಮಿನಲ್ ಕೇಸ್ ಇವೆ..ಒಂದೆರಡು ಸಿನಿಮಾಗಳಿಗೆ ನಾನೇ ಪ್ರೊಡ್ಯೂಸರ್ ಎಂದು ಹೇಳಿಕೊಂಡು ಓಡಾಡ್ತಾನೆ. ಇತ್ತೀಚಿಗೆ ಬಿಜೆಪಿ ಸೇರಿ ಅಲ್ಲಿನ ಹಿಂದೂ ಪ್ರಚಾರ ಸಮಿತಿ ಸದಸ್ಯನಾಗಿದ್ದ. ಸ್ಥಳೀಯವಾಗಿ ಬಿಜೆಪಿ ನಾಯಕ ಎಂದು ಗುರುತಿಸಿಕೊಂಡಿದ್ದ.

ಆದರೆ, ತನ್ನೊಂದಿಗೆ ಗನ್ ಮ್ಯಾನ್ ಇದ್ರೆ ತನ್ನ ಹೆಸರು ಇನ್ನೊಂದು ಲೆವೆಲ್​ನಲ್ಲಿ ಇರುತ್ತೆ.. ಸಮಾಜದಲ್ಲಿ ತನ್ನ ಪ್ರತಿಷ್ಠೆ ಹೆಚ್ಚುತ್ತೆ.. ಸಮಾಜ ಗೌರವಿಸುತ್ತೆ ಎಂಬ ಲೆಕ್ಕಾಚಾರ ಹಾಕಿದ ಬಿಜೆಪಿ ಮುಖಂಡ ಭಾಸ್ಕರ್​ಗೌಡ ಇದಕ್ಕಾಗಿ ಅಡ್ಡದಾರಿ ಹಿಡಿದಿದ್ದ..

ಫೆಬ್ರವರಿ 24ರಂದು ಉಪ್ಪಲ್ ಭಗಾಯತ್​ನಲ್ಲಿ ಮರ್ಡರ್ ಅಟೆಂಪ್ಟ್ ಪ್ಲಾನ್ ಮಾಡಿದ್ದ,.. ಇದಕ್ಕಾಗಿ 2.50 ಲಕ್ಷ ರೂಪಾಯಿ ಕೊಟ್ಟು ಡೀಲ್ ಕುದುರಿಸಿಕೊಂಡಿದ್ದ ಭಾಸ್ಕರ್ ಗೌಡ..

ಪ್ಲಾನ್ ಪ್ರಕಾರ ತನಗೆ ತಾನು ಚಾಕು ಹಾಕಿಕೊಂಡಿದ್ದ ಭಾಸ್ಕರ್ ಗೌಡ, ನಾನು ಹಿಂದೂ ಮುಖಂಡ ಎಂಬ ಕಾರಣಕ್ಕೆ ನನ್ನ ಮೇಲೆ ಕೊಲೆ ಪ್ರಯತ್ನ ನಡೆದಿದೆ… ನನ್ನನ್ನು ಕಾಪಾಡಿ..ನನಗೆ ರಕ್ಷಣೆ ಕೊಡಿ ಎಂದು ರಕ್ತದ ಬನಿಯನ್​ನಲ್ಲೇ ಉಪ್ಪಲ್ ಪೊಲೀಸರನ್ನು ಆಶ್ರಯಿಸಿದ್ದ..

ಆದರೆ, ವಿಚಾರಣೆ ನಡೆಸಿದ ಪೊಲೀಸರಿಗೆ ಬಿಜೆಪಿ ಮುಖಂಡ ಭಾಸ್ಕರ್ ಗೌಡನ ಹೇಳಿಕೆಯಲ್ಲಿ ಗೊಂದಲಗಳು ಇರೋದು ಗೊತ್ತಾಗಿದೆ. ಡೀಪ್ ಆಗಿ ವಿಚಾರಣೆಗೆ ಒಳಪಡಿಸಿದಾಗ ಆತನೇ ಈ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಗೊತ್ತಾಗಿದೆ.

ಇದೀಗ ಬಿಜೆಪಿ ಮುಖಂಡ ಭಾಸ್ಕರ್ ಗೌಡ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಆರು ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪರಾರಿಯಲ್ಲಿರುವ ಇನ್ನಿಬ್ಬರಿಗಾಗಿ ಬಲೆ ಬೀಸಿದ್ದಾರೆ.

ಬಿಜೆಪಿ ಮುಖಂಡ ಭಾಸ್ಕರ್ ಗೌಡ ಬಳಿಯಿಂದ ಇನ್ನೋವಾ ಕಾರ್, 2 ಬೈಕ್, 2ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments