ಕ್ರೈಂ ಸ್ಟೋರಿರಾಜಕೀಯ

ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌ – ಅ.27ಕ್ಕೆ ವಿಚಾರಣೆ ಮುಂದೂಡಿಕೆ!

Temporary relief for Vinay Kulkarni – Hearing adjourned to October 27!

ಬೆಂಗಳೂರು : ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಅ.27ಕ್ಕೆ ಮುಂದೂಡಲಾಗಿದೆ.

ವಿನಯ್ ಕುಲಕರ್ಣಿಗೆ ಸಿಕ್ಕಿರುವ ಜಾಮೀನು ಹಾಗೂ ಶಿಕ್ಷೆಗೆ ನೀಡಿರುವ ತಡೆಯನ್ನು ಪ್ರಶ್ನಿಸಿ ಸಿಬಿಐ ಹಾಗೂ ಗುರುನಾಥ್ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸಿಬಿಐ ಪರವಾಗಿ ಹಿರಿಯ ವಕೀಲ ಹಾಗೂ ASG ಎಸ್.ವಿ. ರಾಜು ಅವರು ವಾದ ಮಂಡಿಸಿದರು. ವಿನಯ್ ಕುಲಕರ್ಣಿ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು.

ಸಾಕ್ಷ್ಯಗಳ ಮೇಲೆ ಪರಿಣಾಮ ಬೀರಿದ ಆರೋಪದ ಮೇಲೆ ಜಾಮೀನು ರದ್ದು ಮಾಡಿತ್ತು. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿತ್ತು. ಆ ಪ್ರಕರಣಕ್ಕೆ ಕೂಡ 4 ವರ್ಷ ಜೈಲು ಶಿಕ್ಷೆ ಇದೆ. ಒಂದು ಕೇಸ್‌ನಲ್ಲಿ ಶಿಕ್ಷೆಯಾಗಿದೆ. ಸಾಕ್ಷ್ಯ ನಾಶದ ಪ್ರಕರಣದ ಟ್ರಯಲ್ ಬಡೆಯುತ್ತಾ ಇದೆ. ಸಾಕ್ಷ್ಯಗಳ ಮೇಲೆ ಪರಿಣಾಮ ಬೀರಿದ ಪ್ರಕರಣ ಬಾಕಿ ಇದೆ ಎಂದು ವಾದಿಸಿದರು. 

ವಾದ-ಪ್ರತಿವಾದ ಆಲಿಸಿದ ಬಳಿಕ ಕೋರ್ಟ್‌ ಅಕ್ಟೋಬರ್ 27ಕ್ಕೆ ವಿಚಾರಣೆಯನ್ನು ಮುಂದೂಡಿದೆ.

Comments (0)

Your email address will not be published. Required fields are marked *

Back to top button
Verified by MonsterInsights