ಸಿನಿಮಾ

ಟಾಕ್ಸಿಕ್ ಮತ್ತೊಂದು ಸಾಂಗ್‌ ರಿಲೀಸ್‌.. ಯಶ್ – ತಾರಾ ಸುತಾರಿಯಾ ‘ಮನಮೋಹಕ’ ಕೆಮಿಸ್ಟ್ರಿ!

Another song from 'Toxic' released... Yash and Tara Sutaria's 'captivating' chemistry!

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಭಾರತೀಯ ಚಿತ್ರರಂಗದಲ್ಲೇ ತೀವ್ರ ಕುತೂಹಲ ಮೂಡಿಸಿರುವ ‘ಟಾಕ್ಸಿಕ್’ ಸಿನಿಮಾದಿಂದ ಮತ್ತೊಂದು ರೋಮ್ಯಾಂಟಿಕ್ ವೀಡಿಯೋ ಹಾಡು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್‌ ಮಾಡುತ್ತಿದೆ.

ಈಗಾಗಲೇ ಬಿಡುಗಡೆಯಾಗಿದ್ದ ‘ತಬಾಹಿ’ ಹಾಡಿನ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಚಿತ್ರತಂಡ ಈಗ ‘ಮನಮೋಹಕ’ ಎಂಬ ಮಾಂಟಾಜ್ ಶೈಲಿಯ ನವಿರಾದ ಡ್ಯುಯೆಟ್ ಸಾಂಗ್ ರಿಲೀಸ್ ಮಾಡಿದೆ. ಯಶ್ ಹಾಗೂ ತಾರಾ ಸುತಾರಿಯಾ ನಡುವಿನ ನವಿರಾದ ಪ್ರೀತಿ, ರೋಮ್ಯಾನ್ಸ್ ಮತ್ತು ಆಕರ್ಷಕ ಲುಕ್ ಈ ಹಾಡಿನ ಪ್ರಮುಖ ಹೈಲೈಟ್.

ಈ ರೋಮ್ಯಾಂಟಿಕ್ ಹಾಡಿನಲ್ಲಿ ಯಶ್-ತಾರಾ ಜೋಡಿಯ ಕೆಮಿಸ್ಟ್ರಿ ಮಾತ್ರವಲ್ಲದೆ, ಸಿನಿಮಾದ ಇತರ ಪ್ರಮುಖ ಪಾತ್ರಗಳ ಸುಂದರ ದೃಶ್ಯಗಳು ಜಾಗ ಪಡೆದುಕೊಂಡಿರುವುದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಯಶ್ ಅವರ ಸಹೋದರಿಯ ಪಾತ್ರದಲ್ಲಿ ನಯನತಾರಾ ಅಭಿನಯಿಸಿದ್ದು, ಕಿಯಾರಾ ಅಡ್ವಾಣಿ ಪ್ರೇಯಸಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದ ಖ್ಯಾತ ಗೀತರಚನೆಕಾರ ಪ್ರಮೋದ್ ಮರವಂತೆ ಈ ಸುಂದರ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ತನಿಷ್ಕ್ ಬಾಗ್ಚಿ, ಫಹೀನ್ ಅಬ್ದುಲ್ಲಾ ಮತ್ತು ಅರ್ಸ್ಲಾಂ ನಿಝಾಮಿ ಜಂಟಿಯಾಗಿ ಈ ಹಾಡಿಗೆ ಮಧುರ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಈ ಹಾಡು ಒಂದೇ ಬಾರಿಗೆ ರಿಲೀಸ್ ಆಗಿದೆ. ಈಗಾಗಲೇ ರಿಲೀಸ್ ಆಗಿರುವ ಪ್ರತಿಯೊಂದು ಹಾಡುಗಳು ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ.

Comments (0)

Your email address will not be published. Required fields are marked *

Back to top button