ದೇಶ/ವಿದೇಶರಾಜಕೀಯ

CJP ಪಾಕಿಸ್ತಾನ ಜನತಾ ಪಾರ್ಟಿ,ಅಭಿಜೀತ್ ISI ಏಜೆಂಟ್ -ಬಿಜೆಪಿ ಆರೋಪ!

BJP says CJP followers are most of them pakistanis abhijeet is an ISI agent

ನವದೆಹಲಿ: ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ತಲ್ಲಣ ಸೃಷ್ಟಿಸಿ, ಕೇವಲ ಒಂದೇ ವಾರದಲ್ಲಿ 20 ಮಿಲಿಯನ್‌ಗೂ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಗಳಿಸುವ ಮೂಲಕ ವಿಶ್ವದ ಅತಿದೊಡ್ಡ ಪಕ್ಷವಾದ ಬಿಜೆಪಿಯನ್ನೇ ಹಿಂದಿಕ್ಕಿದ್ದ ‘ಕಾಕ್ರೋಚ್ ಜನತಾ ಪಾರ್ಟಿ'(CJP) ಸುತ್ತ ಈಗ ಹೊಸ ವಿವಾದದ ಹುತ್ತ ಸೃಷ್ಟಿಯಾಗಿದೆ. ಈ ಪಕ್ಷದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಮತ್ತು ಇದರ ಸ್ಥಾಪಕ ಅಭಿಜೀತ್ ದಿಪ್ಕೆ ಒಬ್ಬ ‘ಐಎಸ್‌ಐ (ISI) ಏಜೆಂಟ್’ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.

20 ಮಿಲಿಯನ್ ಫಾಲೋವರ್ಸ್-ಬಹುತೇಕರು ಪಾಕಿಗಳು!


ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯೊಂದರ ವಿಡಂಬನೆಯಾಗಿ ಆರಂಭವಾದ ಈ ‘ಕಾಕ್ರೋಚ್ ಜನತಾ ಪಾರ್ಟಿ’, ಅತ್ಯಂತ ವೇಗವಾಗಿ ಭಾರತದ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಆದರೆ ಈ ಅತಿವೇಗದ ಬೆಳವಣಿಗೆಯ ಬೆನ್ನಲ್ಲೇ, ಇದರ ಸ್ಥಾಪಕ ಪುಣೆ ಮೂಲದ (ಪ್ರಸ್ತುತ ಅಮೆರಿಕ ನಿವಾಸಿ) ಅಭಿಜೀತ್ ದಿಪ್ಕೆ ಗೆ ಸಾಲು ಸಾಲು ಟೀಕೆಗಳು, ಬೆದರಿಕೆಗಳು ಬರುತ್ತಿದ್ದು ಅವರಿಗೆ ನಿದ್ರಾಭಂಗವಾಗಿದೆ ಎನ್ನಲಾಗಿದೆ.

ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಜಿಂದರ್ ಪಾಲ್ ಸಿಂಗ್ ಬಗ್ಗಾ ಮತ್ತು ಪಕ್ಷದ ಇತರ ವಕ್ತಾರರು CJP ಯ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ನ ದೇಶವಾರು ಡೇಟಾವನ್ನು ಹಂಚಿಕೊಂಡಿದ್ದಾರೆ

ಬಗ್ಗಾ ಡೇಟಾದನ್ವಯ ಸಿಜೆಪಿ ಖಾತೆ ಫಾಲೋವರ್ಸ್​ ಪ್ರಮಾಣ

ದೇಶದ ಹೆಸರುಫಾಲೋವರ್ಸ್ ಪ್ರಮಾಣ (ಶೇಕಡಾವಾರು)ಸ್ಥಾನ
ಪಾಕಿಸ್ತಾನ49%ಪ್ರಥಮ ಸ್ಥಾನ
ಅಮೆರಿಕ (US)14%ದ್ವಿತೀಯ ಸ್ಥಾನ
ಬಾಂಗ್ಲಾದೇಶ14%ತೃತೀಯ ಸ್ಥಾನ
ಭಾರತ9%ನಾಲ್ಕನೇ ಸ್ಥಾನ

ಒಟ್ಟಾರೆ ಶೇ. 77 ರಷ್ಟು ಫಾಲೋವರ್ಸ್ ಶತ್ರು ರಾಷ್ಟ್ರದವರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇಷ್ಟೊಂದು ಫಾಲೋವರ್ಸ್ ಹೆಚ್ಚುತ್ತಿದ್ದರೂ, ‘X’ (ಟ್ವಿಟರ್) ನಲ್ಲಿ ಯಾವುದೇ ಬೆಳವಣಿಗೆ ಇಲ್ಲದಿರುವುದು ಇದು ನಕಲಿ ಹಾಗೂ ನಿಷ್ಕ್ರಿಯ ಖಾತೆಗಳಿರಬಹುದು ಎಂಬ ಸಂಶಯ ಬಲವಾಗಿದೆ.
“ನಿಮ್ಮ ಅತಿ ದೊಡ್ಡ ಅಭಿಮಾನಿ ಬಳಗ ಗಡಿಯಾಚೆಗಿನ ಶತ್ರು ರಾಷ್ಟ್ರದಲ್ಲಿ ಕುಳಿತಿರುವಾಗ, ನೀವು ಭಾರತದಲ್ಲಿ ಯಾರ ಪರವಾಗಿ ಮಾತನಾಡುತ್ತಿದ್ದೀರಿ? ಇನ್ನಾದರೂ ಈ ನಾಟಕ ಬಂದ್ ಮಾಡಿ ಎಂದು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಗುಡುಗಿದ್ದಾರೆ

ಭಾರತದಲ್ಲಿ CJP ಖಾತೆ ಬ್ಲಾಕ್
ಈ ತೀವ್ರ ಸ್ವರೂಪದ ವಿವಾದದ ಬೆನ್ನಲ್ಲೇ, ಭಾರತ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಗುಪ್ತಚರ ಇಲಾಖೆಯ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಕಾಕ್ರೋಚ್ ಜನತಾ ಪಾರ್ಟಿಯ (CJP) ಅಧಿಕೃತ ‘X’ ಹ್ಯಾಂಡಲ್ ಅನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ.

ಅಭಿಜೀತ್ ದಿಪ್ಕೆ ISI ಏಜೆಂಟ್!
ಬಿಜೆಪಿ ನಾಯಕರು ದಿಪ್ಕೆ ವಿರುದ್ಧ 2019 ರಲ್ಲಿ ಕಾನೂನು ಹಕ್ಕುಗಳ ವೀಕ್ಷಣಾಲಯ ಸಲ್ಲಿಸಿದ್ದ ಹಳೆಯ ದೂರನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದು ಮಾಡಿದಾಗ, ಆಮ್ ಆದ್ಮಿ ಪಕ್ಷದ (AAP) ನಾಯಕನಾಗಿದ್ದ ದಿಪ್ಕೆ, ಪಾಕಿಸ್ತಾನ ಪರ ಹಾಗೂ ಹುರಿಯತ್ ಶೈಲಿಯ ಪ್ರತ್ಯೇಕತಾವಾದಿ ಸುಳ್ಳು ಪ್ರಚಾರಗಳನ್ನು ಮಾಡುತ್ತಿದ್ದರು. ಈ ಆರೋಪದಡಿ ಆತನ ಬಂಧನಕ್ಕೆ ಒತ್ತಾಯಿಸಲಾಗಿತ್ತು. ಆದರೆ, ಈ ದೂರು ಕೇವಲ ಆರೋಪವಾಗಿಯೇ ಉಳಿದಿದ್ದು, ತನಿಖಾ ಸಂಸ್ಥೆಗಳಿಂದ ಯಾವುದೇ ಅಧಿಕೃತ ಮುದ್ರೆ ಬಿದ್ದಿಲ್ಲ.

ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ‘ಐ ಆಮ್ ಕಾಕ್ರೋಚ್’ ಟೀ-ಶರ್ಟ್ ಬಿಡುಗಡೆ!
ದೇಶಾದ್ಯಂತ CJP ಪರ-ವಿರೋಧದ ಅಲೆ ಎದ್ದಿರುವ ಬೆನ್ನಲ್ಲೇ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ವಿಡಂಬನೆಯ ಭಾಗವಾಗಿ ‘ಐ ಆಮ್ ಕಾಕ್ರೋಚ್’ (I am Cockroach) ಎಂಬ ವಿಶೇಷ ಟೀ-ಶರ್ಟ್‌ಗಳನ್ನು ಬಿಡುಗಡೆಗೊಳಿಸಿ ಸದ್ದು ಮಾಡುತ್ತಿದ್ದಾರೆ. ಕೇವಲ ತಮಾಷೆಗೆ ಆರಂಭವಾದ ವಿಡಂಬನೆ ಈಗ ಭಾರತ ಮತ್ತು ಪಾಕಿಸ್ತಾನ ನಡುವಿನ ಡಿಜಿಟಲ್ ವಾರ್ ಆಗಿ ಬದಲಾಗಿದೆ. ಒಟ್ಟಾರೆ ಸಂಕಷ್ಟದಲ್ಲಿ ಜನರು ನರಳುತ್ತಿರುವಾಗ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವುದು ವಿಪರ್ಯಾಸ.

#CockroachJanataParty #CJP #AbhiJeetDipke #TajinderBagga #PreetiGandhi #InstagramFollowers #PakistanJanataParty #XAccountBlocked #SocialMediaWar #FreedomTV #FreedomTVNews #KannadaNews

Comments (0)

Your email address will not be published. Required fields are marked *

Back to top button