Ballary

ಬಳ್ಳಾರಿಯಲ್ಲಿ ಖುಲ್ಲಂ ಖುಲ್ಲಾ ಮರಳು ದಂಧೆ

Ballary sand mafia - huagappa attack

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬಳ್ಳಾರಿಯ ಕೊಳಗಲ್ಲು ಗ್ರಾಮದಲ್ಲಿ ಹಗಲು-ರಾತ್ರಿ ಎನ್ನದೆ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ.ಅಕ್ರಮ ಮರಳು ದಂಧೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡ ಹುಲಿಯೆಪ್ಪ ಇವರ ಮೇಲೆ ಗೂಂಡಾಗಳು ಭೀಕರ ಹಲ್ಲೆ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

ಅಧಿಕಾರಿಗಳ ಸಮ್ಮುಖದಲ್ಲೇ ಗೂಂಡಾಗಿರಿ!
ವಿಪರ್ಯಾಸವೇನೆಂದರೆ ಈ ದೌರ್ಜನ್ಯ ನಡೆದಿದ್ದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ (DMG) ಅಧಿಕಾರಿಗಳ ಕಣ್ಣೆದುರೇ! ಅಕ್ರಮ ಮರಳು ಲೂಟಿಯನ್ನು ತಡೆಯಲು ಮತ್ತು ಪ್ರಶ್ನಿಸಲು ಹೋದ ಕಾಂಗ್ರೆಸ್ ಮುಖಂಡ ಹುಲಿಗಪ್ಪ ನಾಯಕ ಅವರ ಮೇಲೆ ಮರಳು ದಂಧೆಕೋರರು ಮುಗಿಬಿದ್ದರು.ಗೂಂಡಾಗಳ ಹಲ್ಲೆಯಿಂದಾಗಿ ಹುಲಿಯಪ್ಪ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೂರು ದಾಖಲು – 15 ಮಂದಿ ವಿರುದ್ಧ ಕೇಸ್
ಘಟನೆಗೆ ಸಂಬಂಧಿಸಿದಂತೆ ನರಸಿಂಹ, ಗೋಪಾಲ ಸೇರಿದಂತೆ ಒಟ್ಟು 15 ಮಂದಿ ವಿರುದ್ಧ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲೇ ಜನ ಸಾಮಾನ್ಯರ ಮೇಲೆ ಕೈ ಮಾಡುವ ಧೈರ್ಯ ಈ ಗೂಂಡಾಗಳಿಗೆ ಎಲ್ಲಿಂದ ಬಂತು? ಬಳ್ಳಾರಿಯಲ್ಲಿ ಪೊಲೀಸರಿಗೆ ಮರ್ಯಾದೆನೇ ಇಲ್ವಾ ಎಂಬ ಆಕ್ರೋಶ ವ್ಯಕ್ತವಾಗಿದೆ.

ಬಳ್ಳಾರಿಯಲ್ಲಿ ಮರಳು ಮಾಫಿಯಾ ಅಟ್ಟಹಾಸ ಮಿತಿಮೀರುತ್ತಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಪ್ರಭಾವಿಗಳ ಕೈವಾಡ? ಈ ದಂಧೆಯ ಹಿಂದೆ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಬೆಂಬಲವಿದೆಯೇ ಎಂಬ ಗುಮಾನಿ ಹರಡಿದೆ. DMG ಅಧಿಕಾರಿಗಳ ಎದುರೇ ಹಲ್ಲೆ ನಡೆದರೂ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿರುವುದಕ್ಕೆ ಬಳ್ಳಾರಿಯಲ್ಲಿ ಗೂಂಡಾರಾಜ್ಯ ಇದೆ ಎಂಬುದಕ್ಕೆ ಇಂಬು ನೀಡಿದೆ.
ಗಣಿನಾಡಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಸಾರ್ವಜನಿಕರ ಸಮ್ಮುಖದಲ್ಲೇ ಒಬ್ಬ ಮುಖಂಡನ ಮೇಲೆ ಹಲ್ಲೆ ನಡೆಸುವ ಮಟ್ಟಕ್ಕೆ ಮರಳು ಮಾಫಿಯಾ ಬೆಳೆದಿದೆ ಎಂದರೆ ಸಾಮಾನ್ಯ ಜನರ ಪಾಡೇನು. ಮರಳು ಲೂಟಿಯಿಂದಾಗಿ ನೈಸರ್ಗಿಕ ಸಂಪತ್ತು ನಾಶವಾಗುತ್ತಿರುವುದರ ಜೊತೆಗೆ ಜನರ ಹಾಗೂ ಮಕ್ಕಳ ಪ್ರಾಣಕ್ಕೂ ಅಪಾಯ ಬಂದೊದಗಿದೆ.ಇನ್ನಾದರೂ ಬಳ್ಳಾರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಅಕ್ರಮ ದಂಧೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತದೆಯೇ ಎಂಬುದು ಪ್ರಶ್ನೆಯಾಗಿದೆ.

#BallariNews #SandMafia #AttackOnLeader #JusticeForHuligappa #BallariPolice #MiningMafia #KarnatakaPolitics #FreedomTV #GaniNadu #LawAndOrder

Comments (0)

Your email address will not be published. Required fields are marked *

Back to top button