ರಾಜಕೀಯಸುದ್ದಿ

ಡಿಕೆ ಬ್ರದರ್ಸ್ ಡೆಲ್ಲಿ ಭೇಟಿ, ಪರಂ ಹಿಂಗ್ಯಾಕಂದ್ರು..?

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ದೆಹಲಿ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಾವು ಮಾಡೋದೇ ರಾಜಕೀಯ, ಇದರಲ್ಲಿ ಹೊಸ ಬೆಳವಣಿಗೆ ಏನಿದೆ ಎಂದು ಪ್ರಶ್ನಿಸಿದ ಅವರು, ರಾಜಕಾರಣ ಎನ್ನುವುದೇ ಇಂತಹ ವಿದ್ಯಮಾನಗಳನ್ನು ಒಳಗೊಂಡಿರುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಪ್ರತ್ಯೇಕವಾಗಿ ರಾಜಕೀಯ ಬೆಳವಣಿಗೆ ಎಂದು ವಿಶೇಷವಾಗಿ ಏನೂ ಇಲ್ಲ, ಇದೆಲ್ಲವೂ ಸಹಜ ಪ್ರಕ್ರಿಯೆ ಎಂದು ಅವರು ಸ್ಪಷ್ಟಪಡಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ನಮ್ಮ ರಾಜ್ಯಕ್ಕೆ ಸಂಬಂಧಪಟ್ಟ ಪ್ರಮುಖ ನಾಯಕರು ಮತ್ತು ಅವರು ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಕೆಲಸಗಳಿಗಾಗಿ ದೆಹಲಿಗೆ ತೆರಳಿದ್ದಾರೆ ಎಂದು ಪರಮೇಶ್ವರ್ ಸಮರ್ಥಿಸಿಕೊಂಡರು. ಈ ಭೇಟಿಯ ಹಿಂದೆ ಬೇರೆ ಏನೋ ರಾಜಕೀಯ ಕಾರಣಗಳಿವೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದ ಅವರು, ವಿಷಯವನ್ನು ಅನಗತ್ಯವಾಗಿ ದೊಡ್ಡದು ಮಾಡಬಾರದು ಎಂದು ತಿಳಿಸಿದರು. ಇತ್ತೀಚೆಗೆ ನಾವು ಕೂಡ ಸಭೆ ನಡೆಸಿ, ಒಟ್ಟಾಗಿ ಊಟ ಮಾಡಿ ಬಂದಿದ್ದೇವೆ, ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಭೇಟಿಯ ಹಿಂದಿನ ರಾಜಕೀಯ ಲೆಕ್ಕಾಚಾರಗಳನ್ನು ತಳ್ಳಿಹಾಕಿದರು.

Comments (0)

Your email address will not be published. Required fields are marked *

Back to top button