ರಾಜಕೀಯಸುದ್ದಿಹಣಕಾಸು

ಯುದ್ಧದ ಎಫೆಕ್ಟ್‌.. ಸಿಲ್ವರ್‌, ಗೋಲ್ಡ್‌ ರೇಟ್‌ ಇಳಿಕೆ ..!

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ. ಇತ್ತೀಚೆಗೆ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದ ಬಂಗಾರದ ದರ ಇದೀಗ ಇಳಿಕೆಯಾಗುತ್ತಿರುವುದು ಗಮನ ಸೆಳೆಯುತ್ತಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿ ಹಾಗೂ ಡಾಲರ್‌ ಮೇಲೆ ಹೆಚ್ಚುತ್ತಿರುವ ಹೂಡಿಕೆಗಳ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. 10 ಗ್ರಾಂ ಬಂಗಾರದ ದರ ಸುಮಾರು 1 ಲಕ್ಷ 60 ಸಾವಿರ ರೂಪಾಯಿಗೆ ತಲುಪಿದ ನಂತರ ಈಗ ನಿಧಾನವಾಗಿ ಕುಸಿತದ ಹಾದಿಯತ್ತ ಸಾಗುತ್ತಿದೆ.

ಇದೇ ವೇಳೆ ಬೆಳ್ಳಿಯ ದರವೂ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಪ್ರತಿ ಕಿಲೋಗೆ ಸುಮಾರು 2 ಲಕ್ಷ 60 ಸಾವಿರ ರೂಪಾಯಿಯ ಮಟ್ಟಕ್ಕೆ ಬಂದಿದೆ. ದಿನದಿಂದ ದಿನಕ್ಕೆ ಗೋಲ್ಡ್‌ ಮತ್ತು ಸಿಲ್ವರ್‌ ಬೆಲೆಯಲ್ಲಿ ಇಳಿಕೆ ಕಾಣಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಚಟುವಟಿಕೆ ಹೆಚ್ಚಾಗಿದೆ.

ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಗ್ರಾಹಕರು ಖುಷಿಪಟ್ಟರೆ, ಹೂಡಿಕೆದಾರರಿಗೆ ಇದು ಸ್ವಲ್ಪ ಮಟ್ಟಿಗೆ ಶಾಕ್‌ ನೀಡಿದಂತಾಗಿದೆ.

ಒಟ್ಟಾರೆ, ಮಾರುಕಟ್ಟೆಯ ಈ ಬದಲಾವಣೆಗಳು ಖರೀದಿದಾರರಿಗೆ ಅನುಕೂಲಕರವಾಗಿದ್ದು, ಹೂಡಿಕೆದಾರರು ಎಚ್ಚರಿಕೆಯಿಂದ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ.

Comments (0)

Your email address will not be published. Required fields are marked *

Back to top button