Top Newsಕ್ರೈಂ ಸ್ಟೋರಿಜಿಲ್ಲೆಸುದ್ದಿ

ಹುಬ್ಬಳ್ಳಿ ಜೈಲಿನಲ್ಲಿ ಕೈದಿಗಳ ‘ರೆಸಾರ್ಟ್’ ಲೈಫ್; ಗಾಂಜಾ-ಮದ್ಯದ ಪಾರ್ಟಿ ವಿಡಿಯೋ ವೈರಲ್!

ಹುಬ್ಬಳ್ಳಿ: ಬೆಂಗಳೂರು, ಶಿವಮೊಗ್ಗ ಮತ್ತು ಬೆಳಗಾವಿ ಜೈಲುಗಳ ಬೆನ್ನಲ್ಲೇ ಈಗ ಹುಬ್ಬಳ್ಳಿ ಸಬ್ ಜೈಲು ಕೂಡ ಸುದ್ದಿಯಲ್ಲಿದೆ. ಜೈಲಿನೊಳಗೆ ವಿಚಾರಣಾಧೀನ ಕೈದಿಗಳು ಮತ್ತು ಕೊಲೆ ಆರೋಪಿಗಳು ಗಾಂಜಾ, ಮದ್ಯ ಹಾಗೂ ಮಾಂಸದೂಟದೊಂದಿಗೆ ಮೋಜು ಮಾಡುತ್ತಿರುವ ವಿಡಿಯೋಗಳು ಹೊರಬಂದಿವೆ. ರೆಸಾರ್ಟ್‌ ಮಾದರಿಯ ಸೌಲಭ್ಯಗಳನ್ನು ಪಡೆಯುತ್ತಾ ಕೈದಿಗಳು ಟಿವಿ, ಮೊಬೈಲ್ ಮತ್ತು ಕ್ಯಾರಂ ಬೋರ್ಡ್‌ ಬಳಸುತ್ತಿದ್ದಾರೆ.

ಮೂರು ದಿನಗಳ ಹಿಂದಷ್ಟೇ ಡಿಜಿಪಿ ಅಲೋಕ್ ಕುಮಾರ್ ಅವರು ಈ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ ಎಂದು ಭರವಸೆ ನೀಡಿದ ಬೆನ್ನಲ್ಲೇ ಈ ವಿಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಜೈಲಿನೊಳಗೆ ಯಾವುದೇ ಅಡೆತಡೆಯಿಲ್ಲದೆ ನಿಷೇಧಿತ ವಸ್ತುಗಳು ಸರಬರಾಜು ಆಗುತ್ತಿರುವುದು ಭದ್ರತಾ ಲೋಪವನ್ನು ಎತ್ತಿ ಹಿಡಿದಿದೆ .

ಈ ವಿಡಿಯೋಗಳ ಬಗ್ಗೆ ಸ್ಪಷ್ಟನೆ ನೀಡಿರುವ ಡಿಜಿಪಿ ಅಲೋಕ್ ಕುಮಾರ್, ದೃಶ್ಯಗಳು ಹುಬ್ಬಳ್ಳಿ ಸಬ್ ಜೈಲಿನದ್ದೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಇವು ಡಿಸೆಂಬರ್ 2025ರ ಹಳೆಯ ವಿಡಿಯೋಗಳು ಮತ್ತು ತಾವು ಅಧಿಕಾರ ಸ್ವೀಕರಿಸುವ ಮೊದಲು ನಡೆದ ಘಟನೆಗಳೆಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

Comments (0)

Your email address will not be published. Required fields are marked *

Back to top button