ಹೈಟೆಕ್ ‘ಸೈನಿಕ’ನ ಲಾಂಚಿಂಗ್‌ಗೆ ಕೌಂಟ್‌ಡೌನ್; ಅಪ್ಪನ ಹಾದಿಯಲ್ಲೇ ಧ್ಯಾನ್ ಯೋಗೀಶ್ವರ್ ಸವಾರಿ!
ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ವಾರಸುದಾರನ ಅದ್ಧೂರಿ ಎಂಟ್ರಿಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ‘ಸೈನಿಕ’ ಎಂದೇ ಜನಪ್ರಿಯರಾಗಿರುವ ನಟ ಹಾಗೂ ರಾಜಕಾರಣಿ ಸಿ.ಪಿ. ಯೋಗೀಶ್ವರ್ ಅವರ ಪುತ್ರ ಧ್ಯಾನ್ ಯೋಗೀಶ್ವರ್ ಈಗ ಬೆಳ್ಳಿಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ.
ಅಪ್ಪನಂತೆ ಖಡಕ್ ಲುಕ್ ಮತ್ತು ಬಾಲಿವುಡ್ ನಟರನ್ನೂ ಮೀರಿಸುವಂತಹ ಫಿಸಿಕ್ ಹೊಂದಿರುವ ಧ್ಯಾನ್, ಸೋಷಿಯಲ್ ಮೀಡಿಯಾ ರೀಲ್ಸ್ ಮೂಲಕ ಈಗಾಗಲೇ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಇತ್ತೀಚಿನ ಅವರ ಹೊಸ ಅವತಾರ ಕಂಡಿರುವ ಫ್ಯಾನ್ಸ್, ಮಗನಲ್ಲೂ ಅಪ್ಪನ ಆ ‘ಸೈನಿಕ’ ಕಳೆಯನ್ನು ಕಾಣುತ್ತಿದ್ದಾರೆ.

ಮೆಗಾ ಲಾಂಚ್‌ಗೆ ರೆಡಿಯಾದ ಯಂಗ್ ಹೀರೋ ; ಸ್ಟೈಲ್‌ಗೆ ಫ್ಯಾನ್ಸ್ ಫಿದಾ!
ಧ್ಯಾನ್ ಅವರ ಈ ಸಿನಿಮಾ ಕನಸಿಗೆ ತಾಯಿ ಶೀಲಾ ಯೋಗೀಶ್ವರ್ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಶೀಲಾ ಅವರು ಚಿತ್ರರಂಗಕ್ಕೆ ಹೊಸಬರೇನಲ್ಲ,ಹೊಸಪೇಟೆಯ ಐತಿಹಾಸಿಕ ‘ಲಕ್ಷ್ಮೀ ಥಿಯೇಟರ್’ ಮಾಲೀಕರಾಗಿರುವ ಇವರಿಗೆ ಸಿನಿಮಾ ಉದ್ಯಮದ ನಾಡಿಮಿಡಿತ ಚೆನ್ನಾಗಿ ತಿಳಿದಿದೆ. ಹೀಗಾಗಿ, ಮಗನನ್ನು ಅದ್ದೂರಿಯಾಗಿ ಲಾಂಚ್ ಮಾಡಲು ತೆರೆಮರೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಧ್ಯಾನ್ ಕೇವಲ ಗ್ಲಾಮರ್ ಮಾತ್ರವಲ್ಲದೆ, ನಟನೆಯಲ್ಲೂ ಪಳಗುತ್ತಿದ್ದಾರೆ. ಈಗಾಗಲೇ ನೀನಾಸಂ ಮತ್ತು ರಂಗಶಂಕರದಲ್ಲಿ ಅಭಿನಯದ ಪ್ರಾಥಮಿಕ ಪಾಠ ಕಲಿತಿರುವ ಇವರು, ಪ್ರಸ್ತುತ ಲಂಡನ್‌ನಲ್ಲಿ ಪದವಿ ವ್ಯಾಸಂಗದ ಜೊತೆಗೆ ಅಲ್ಲಿನ ಪ್ರಸಿದ್ಧ ಆಕ್ಟಿಂಗ್ ಸ್ಕೂಲ್‌ನಲ್ಲಿ ಸ್ಟಂಟ್ಸ್ ಮತ್ತು ತಾಂತ್ರಿಕ ಕಲೆಗಳನ್ನು ಕಲಿಯುತ್ತಿದ್ದಾರೆ.

ಲಂಡನ್‌ನಿಂದ ಕರ್ನಾಟಕಕ್ಕೆ ಮರಳಿದ ಆರು ತಿಂಗಳೊಳಗೆ ಧ್ಯಾನ್ ಯೋಗೀಶ್ವರ್ ಅವರ ಮೆಗಾ ಬಜೆಟ್ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. ಅಂದು ಸಿ.ಪಿ. ಯೋಗೀಶ್ವರ್ ಅವರು ‘ಸೈನಿಕ’ ಚಿತ್ರದ ಮೂಲಕ ಕರುನಾಡ ಮನೆಮಾತಾಗಿದ್ದರು. ಈಗ ಅವರ ವಾರಸುದಾರ ಹೈಟೆಕ್ ‘ಸೈನಿಕ’ನಾಗಿ ಯಾವ ರೀತಿ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಸ್ಯಾಂಡಲ್‌ವುಡ್‌ನಲ್ಲಿ ಮನೆಮಾಡಿದೆ. ಖಡಕ್ ಪರ್ಸನಾಲಿಟಿ ಹಾಗೂ ಪರಿಣತಿಯೊಂದಿಗೆ ಬರುತ್ತಿರುವ ಧ್ಯಾನ್, ಯುವ ಪೀಳಿಗೆಯ ಹೊಸ ಕ್ರಶ್ ಆಗುವುದರಲ್ಲಿ ಸಂಶಯವಿಲ್ಲ.


