ರಾಜ್ಯಸುದ್ದಿ

ಮನೆಯಲ್ಲಿ ನಿಗೂಢ ಸ್ಫೋಟ.. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಂಪತಿ

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳೇ ಆಲೂರು ಗ್ರಾಮದ ಮನೆಯೊಂದರಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿ, ಸ್ಫೋಟದ ರಭಸಕ್ಕೆ ಮನೆ ವಸ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಮನೆಯಲ್ಲಿ ಇದ್ದ ದಂಪತಿ ಸುದರ್ಶನ್​​​ ಆಚಾರ್​, ಕಾವ್ಯಗೆ ಗಂಭೀರ ಗಾಯಗಳಾಗಿವೆ..

ಸುದರ್ಶನ್​ ಆಚಾರ್​ ಅವರ ಎರಡು ಕಾಲುಗಳಿಗೂ ಭಾರೀ ಪೆಟ್ಟು ಬಿದ್ದಿದೆ. ಗಾಯಾಳುಗಳಾದ ಸುದರ್ಶನ್ ಆಚಾರ್, ಕಾವ್ಯಾ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್​ ಆಸ್ಪತ್ರೆಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಂಪತಿಯನ್ನು ಕರೆದೊಯ್ಯಲಾಗಿದೆ. ಇನ್ನ ರಜಾ ಕಾರಣ ಮಾವನ ಮನೆಗೆ ಬಂದಿದ್ದ ಸುದರ್ಶನ್ ಅಕ್ಕನ ಮಗ ಗೌತಮ್​ಗೆ ಸಣ್ಣ ಪುಟ್ಟ ಗಾಯಗಳಾಗಿ ಯಾವುದೇ ತೊಂದರೆಗಳಾಗಿಲ್ಲ.

ಪತಿ.. ಪತ್ನಿ ಇಬ್ಬರೂ ಸಾವು ಬದುಕಿನ ಮಧ್ಯೆ ಹೋರಾಟದಲ್ಲಿದ್ದಾರೆ. ಸ್ಫೋಟಗೊಂಡ ಮನೆಗೆ ಭೇಟಿ ನೀಡಿದ ಜನರಲ್ಲಿ ಕೆಲವ್ರು ಸಿಲಿಂಡರ್​ ಅಂತಿದ್ರೆ.. ಇನ್ನೂ ಕೆಲವ್ರು ಗೀಸರ್ ಅಂತಿದ್ರು.. ಆದ್ರೆ ಈ ನಿಗೂಡ ಸ್ಫೋಟದ ಸತ್ಯ ಆಲೂರು ಪೊಲೀಸರ ತನಿಖೆ ಬಳಿಕವಷ್ಟೇ ಹೊರ ಬರಬೇಕಿದೆ.

Comments (0)

Your email address will not be published. Required fields are marked *

Back to top button