Tuesday, February 10, 2026
24.4 C
Bengaluru
Google search engine
LIVE
ಮನೆರಾಜಕೀಯಸಿಎಂಗೆ ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿಯಿಲ್ಲ- ವಿಜಯೇಂದ್ರ

ಸಿಎಂಗೆ ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿಯಿಲ್ಲ- ವಿಜಯೇಂದ್ರ

ಬೀದರ್​​: ಇಡೀ ಹಿಂದೂ ಸಮಾಜ ಒಗ್ಗಟ್ಟಾಗಿ ನಿಲ್ಲುವ ನಾವಿದ್ದೇವೆ. ಸಮಾಜವನ್ನು ಒಡೆಯುವ ಕೆಲಸ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ಮಾಡಬಾರದು. ನಾವು ಅತಿವೃಷ್ಟಿ ವೀಕ್ಷಣೆಗೆ ಬಂದಿರುವೆ. ಜಾತಿವಾರು ಸಮೀಕ್ಷೆ ಬಗ್ಗೆ ಹೆಚ್ಚೇನೂ ಮಾತನಾಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು..

ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗೆ ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿಯಿಲ್ಲ. ಈ ಭಾಗದಲ್ಲಿ ರೈತರ ಬೆಳೆಗಳು ಸಂಪೂರ್ಣವಾಗಿ ಸರ್ವನಾಶವಾಗಿದೆ. ಕಳೆದ ಒಂದು ತಿಂಗಳಿಂದ ಮಳೆಯಾಗಿ ಎಲ್ಲಾ ಬೆಳೆಗಳು ನಾಶವಾಗಿದೆ.

ರೈತರ ವಿಚಾರದಲ್ಲಿ ತಾತ್ಸಾರ ಬೇಡ. ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಸೀಮೀತರಾಗಿದ್ದಾರೆ. ಇಂಥಹ ಸಮಯದಲ್ಲಿ ಸಿಎಂ ಹಾಗೂ ಸಚಿವರ ಹುಡುಗಾಟ ಬೇಡ. ಸಿಎಂ, ಸಚಿವರು ಬರೀ ವಿಡಿಯೋ ಕಾನ್ಸರೆನ್ಸ್ ಗೆ ಮಾತ್ರ. ಸೀಮಿತರಾಗಿದ್ದಾರೆ. ರಾಜ್ಯ ಸರ್ಕಾರದ ಜವಾಬ್ದಾರಿ ತಮ್ಮ ಮಾಡುತ್ತಿಲ್ಲ ಎಂದರು.

ಬಿಎಸ್ ಯಡಿಯೂರಪ್ಪ ಅವರು ಮನೆ ಕಳೆದುಕೊಂಡವರಿಗೆ ಕೇಂದ್ರದ ಕಡೆ ನೋಡದೆ ಪರಿಹಾರ ಕೊಟ್ಟಿದ್ದರು. ಇನ್ನು ತಡ ಮಾಡದೆ ನೀವು ಸಚಿವರು ಇಲ್ಲಿಗೆ ಧಾವಿಸಿ ಎಂದು ವಾಗ್ದಾಳಿ ನಡೆಸಿದರು. ವಿಜಯೇಂದ್ರ ಅವರಿಗೆ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಪ್ರಭು ಚೌಹಾಣ್, ಶಾಸಕ ಶೈಲೇಂದ್ರ ಬೆಲ್ದಾಳೆ ಸಾಥ್ ನೀಡಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments