
ತಮಕೂರು:ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ಹೊರವಲಯದ ಸಾಯಿ ಡಾಬಾ ಬಳಿ ನಡೆದಿದೆ..
ಮೃತ ಪಟ್ಟವರನ್ನ ಶಿರಾ ತಾಲೂಕಿನ ಎಮ್ಮೇರಹಳ್ಳಿ ತಾಂಡದ ವಿಷ್ಣು ಎನ್. ನಾಯ್(24), ರಾಮನಗರ ಜಿಲ್ಲೆಯ ಕೊಳಗೊಂಡನಹಳ್ಳಿ ಗ್ರಾಮದ ಮುತ್ತುರಾಜ್ (36) ಹಾಗೂ ವೆಂಕಟಧನಶೆಟ್ಟಿ (64) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ವಿಷ್ಣು ಎಂಬ ವ್ಯಕ್ತಿ ಬೈಕಲ್ಲಿ ತೆರಳುತಿದ್ದಾಗ ಎದುರುಗಡೆ ಬಂದ ಹೋಂಡಾ ಆಕ್ಟಿವಾ ಡಿಕ್ಕಿ ಹೊಡೆದಿದೆ. ಪರಿಣಾಮ ಆಕ್ಟಿವಾದಲ್ಲಿ ತೆರಳುತಿದ್ದ ರಾಮನಗರ ಮೂಲದ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಈ ಸಂಬಂಧ ಶಿರಾ ನಗರ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ಧಾರೆ..




