
ಕಲಬುರಗಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿರುವ ವಾಟ್ಸಪ್ ಸ್ಟೇಟಷ್ ಹಾಕಿರುವ ಆರೋಪದ ಮೇರೆಗೆ PDO ಒಬ್ಬರನ್ನು ಬಂಧಿಸಿರುವ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ನಡೆದಿದೆ.
ಆಳಂದ ತಾಲೂಕಿನ ಸುಂಟನೂರು ಗ್ರಾಮ ಪಂಚಾಯಿತಿ PDO ಪ್ರವೀಣ್ ಕುಮಾರ್ ಉಡುಗಿ ಅದೇ ಗ್ರಾಮದ ಮಲ್ಲಿಕಾರ್ಜುನ್ ಎಂಬಾತ ನೀಡಿದ ದೂರಿನ ಮೇರೆಗೆ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.
PDO ಪ್ರವೀಣ್ ಕುಮಾರ್ ತಮ್ಮ ವಾಟ್ಸಪ್ ಸ್ಟೇಟಷ್ನಲ್ಲಿ ‘ಸಿದ್ದರಾಮುಲ್ಲಾ’ ಎಂದು ಬರೆದುಕೊಳ್ಳುವುದರ ಜೊತೆಗೆ ಸಿದ್ದರಾಮಯ್ಯ ಅವರ ತಲೆಗೆ ಮುಸ್ಲಿಮರು ಹಾಕುವಂತ ಟೊಪ್ಪಿ ಧರಿಸಿರುವ ಎಡಿಟ್ ಮಾಡಲಾದ ಚಿತ್ರವನ್ನು ಹಾಕಿಕೊಂಡಿದ್ದಾರೆ.
ಈ ಕುರಿತು PDO ಪ್ರವೀಣ್ ಕುಮಾರ್ ಉಡುಗಿ ವಿರುದ್ಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆ 299,353, 198 ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ.




