ಹುಬ್ಬಳ್ಳಿ: ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಹುಬ್ಬಳ್ಳಿಯ ಹೊಸೂರು ವೃತ್ತದ ಬಳಿಯ ಪಾರಿಜಾತ ಲಾಡ್ಜ್ ಮೇಲೆ ದಾಳಿ ಮಾಡಿ ಅಂತರಾಜ್ಯದ ಐವರು ಮಹಿಳೆಯರು ಹಾಗೂ 5 ಮಂದಿ ಪುರುಷರನ್ನು ಬಂಧಿಸಿದ್ದಾರೆ.
ಮೈಸೂರಿನ ಒಡನಾಡಿ ಸಂಸ್ಥೆಯ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಲಾಡ್ಜ್ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ಧಾರೆ. ದಾಳಿ ವೇಳೆ ಕಲ್ಕತ್ತಾದ ಇಬ್ಬರು, ಬೆಂಗಳೂರಿನ ಓಬ್ಬಳು ಹಾಗೂ ದಾವಣಗೆರೆಯ ಇಬ್ಬರು ಹೆಣ್ಣು ಮಕ್ಕಳ ರಕ್ಷಣೆ ಮಾಡಲಾಗಿದೆ.
ಇನ್ನು ಪೊಲೀಸರ ದಾಳಿ ವೇಳೆ ಶೌಚಾಲಯದಲ್ಲಿ ಗುಪ್ತ ಕೊಠಡಿ ಪತ್ತೆಯಾಗಿದೆ. ಆಕಸ್ಮಿಕವಾಗಿ ಲಾಡ್ಜ್ ಮೇಲೆ ಯಾರಾದರೂ ದಾಳಿ ಮಾಡಿದ್ರೆ ಅಡಗಿಕೊಳ್ಳುವ ಸಲುವಾಗಿ ನಿರ್ಮಾಣ ಮಾಡಲಾಗಿದೆ. ಇನ್ನು ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮಿಷನರ್ ಎನ್. ಶಶಿಕುಮಾರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.