ಭಾರತವನ್ನು ಕೆಣಕಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೈನಿಕರು ಪೆಟ್ಟಿನ ಮೇಲೆ ಪೆಟ್ಟು ಕೊಡ್ತಿದ್ದಾರೆ. ಇದರ ನಡುವೆ ಪಾಕಿಸ್ತಾನವೇ ಪ್ರತೀಕಾರವಾಗಿ ಭಾರತದ 15 ಕಡೆ ದಾಳಿ ಮಾಡಲು ಪ್ರಯತ್ನ ನಡೆಸಿದೆ. ಭಾರತದ ಮೇಲೆ ಚೀನಾ ಕೊಟ್ಟಿದ್ದ HQ-9 ಕ್ಷಿಪಣಿಗಳನ್ನ ಬಳಸಿ ದಾಳಿ ಮಾಡಲು ಪ್ರಯತ್ನಿಸಿತ್ತು. ಆದರೆ ಪಾಕಿಸ್ತಾದನ ಎಲ್ಲ ಕ್ಷಿಪಣಿಗಳನ್ನೂ ಭಾರತೀಯ ಸೇನೆ ನಿಷ್ಕ್ರಿಯಗೊಳಿಸಿದೆ.
ಮಧ್ಯರಾತ್ರಿ ವೇಳೆ ಭಾರತದ ಮೇಲೆ ದಾಳಿಗೆ ಪಾಕಿಸ್ತಾನ ಯತ್ನಿಸಿದೆ. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್ ಕೋಟ್, ಅಮೃತ್ ಸರ, ಕಪುರ್ತಾಲಾ, ಲೂಧಿಯಾನಾ, ಜಲಂಧರ್, ಆದಂಪುರ್, ಭಟಿಂಡ, ಚಂಢೀಗಡ, ನಲ್, ಫಲೋಡಿ, ಉತ್ತರಲಾಯ್, ಭುಜ್ ಮೇಲೆ ಪಾಕಿಸ್ತಾನ ದಾಳಿಗೆ ಪ್ರಯತ್ನಿಸಿದೆ. ಕ್ಷಿಪಣಿ ಹಾಗೂ ಡ್ರೋಣ್ಗಳನ್ನ ಇದಕ್ಕಾಗಿ ಪಾಕ್ ಬಳಸಿದೆ. ಆದ್ರೆ ಭಾರತದ ಸೇನೆ ಅವೆಲ್ಲವನ್ನೂ ಮಾರ್ಗಮಧ್ಯೆಯೇ ಹೊಡೆದುರುಳಿಸಿದೆ.
ಭಾರತವನ್ನು ರಕ್ಷಿಸಿದ ಸುದರ್ಶನ ಚಕ್ರ
ಭಾರತದ 15 ಪ್ರದೇಶಗಳ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಲು ಮುಂದಾದಾಗ, ಭಾರತದ ಸುದರ್ಶನ ಚಕ್ರವೇ ಆ ಕ್ಷಿಪಣಿಗಳನ್ನ ನಿಷ್ಕ್ರಿಯಗೊಳಿಸಿದೆ. ಭಾರತೀಯ ಸೇನೆಯಲ್ಲೂ ಇಸ್ರೇಲ್ ಮಾದರಿಯ ಐರನ್ ಡೋಮ್ ಇದೆ. ಇದರ ಹೆಸರು ಸುದರ್ಶನ ಚಕ್ರ. ಪಾಕಿಸ್ತಾನದಿಂದ ಹಾರಿಬರ್ತಿದ್ದ ವಿನಾಶಕಾರಿ ಚೀನೀ ನಿರ್ಮಿತ ಕ್ಷಿಪಣಿಗಳನ್ನ ಈ S-400 ಸುದರ್ಶನ ಚಕ್ರ ಹೆಸರಿನ ಏರ್ ಡಿಫೆನ್ಸ್ ಸಿಸ್ಟಂ ತಡೆದಿದೆ. ಅಲ್ಲದೇ S-400 ಸುದರ್ಶನ ಚಕ್ರ ಪಾಕಿಸ್ತಾನದ ದಾಳಿಯನ್ನ ಹಿಮ್ಮೆಟ್ಟಿಸಿದೆ.