ದೇಶ/ವಿದೇಶ

ಲಾಹೋರ್​ ಏರ್​​ಪೋರ್ಟ್​​​​ನಲ್ಲಿ 3 ಬಾಂಬ್ ಬ್ಲಾಸ್ಟ್..!

ಪಾಕಿಸ್ತಾನಕ್ಕೆ ನುಗ್ಗಿ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿಬಂದ ಬೆನ್ನಲ್ಲೇ ಮತ್ತೆ ಪಾಕಿಸ್ತಾನದಲ್ಲಿ ಬಾಂಬ್​​​ ಸ್ಫೋಟದ ಸದ್ದು ಕೇಳಿಬಂದಿದೆ. ಪಾಕಿಸ್ತಾನದ ಲಾಹೋರ್ ಏರ್​ಪೋರ್ಟ್ ಬಳಿ 3 ಬಾಂಬ್​​ಗಳು ಸ್ಫೋಟಿಸಿವೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ. ಆದ್ರೆ ಈ ಬಾಂಬ್​​ಗಳು ಏಕಾಗಿ ಸ್ಫೋಟಿಸಿವೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.

ಭಾರತದ ಗಡಿಗೆ ಅತಿ ಸಮೀಪದಲ್ಲೇ ಇರುವ ಲಾಹೋರ್​​ನ ವಾಲ್ಟನ್ ಏರ್​​ಪೋರ್ಟ್ ಬಳಿ ಮುಂಜಾನೆ ಬಾಂಬ್ ಸ್ಫೋಟಗೊಂಡಿದೆ. ಬಾಂಬ್ ಸ್ಫೋಟಿಸಿದ ಕೂಡಲೇ ಲಾಹೋರ್​​ನಲ್ಲಿ ಸೈರನ್​​ಗಳು ಮೊಳಗಿವೆ. ಏರ್ ಸ್ಟ್ರೈಕ್​ ಆಗಬಹುದು ಎನ್ನುವ ಕಾರಣಕ್ಕೆ ಸೈರನ್​​ಗಳನ್ನ ಮೊಳಗಿಸಲಾಯ್ತು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದೆ.

Comments (0)

Your email address will not be published. Required fields are marked *

Back to top button