Top Newsದೇಶ/ವಿದೇಶ

ಇದೇ ಸಿಂಧೂರದ ಪವರ್​.. ನಾರಿ ಶಕ್ತಿ ಮೂಲಕವೇ ಭಾರತ ಟಕ್ಕರ್

ಆಪರೇಷನ್ ಸಿಂಧೂರ.. ಹೆಸರೇ ಸೂಚಿಸುವಂತೆ ಇದು ಸಿಂಧೂರ ಅಳಿಸಿದವರ ವಿರುದ್ಧದ ಕಾರ್ಯಾಚರಣೆ.. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಶತಕೋಟಿ ಭಾರತೀಯರ ಹೃದಯವನ್ನು ಗೆದ್ದಿದ್ದಾರೆ.

ಆಪರೇಷನ್ ಸಿಂಧೂರದ ವಿಶೇಷಗಳನ್ನು ಹಂಚಿಕೊಂಡಿದ್ದು ಮಹಿಳಾ ಅಧಿಕಾರಿಗಳೇ ಎಂಬುದು ಇಲ್ಲಿ ಗಮನಿಸಬೇಕಾದ ವಿಶೇಷ. ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಜೊತೆ ಕಾಣಿಸಿಕೊಂಡಿದ್ದು ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್..

ಕೋಟ್ಲಿಯ ಗೂಲ್ಪುರ್ ಟೆರರ್ ಕ್ಯಾಂಪ್ ಮೇಲೆ ಹೇಗೆ ದಾಳಿ ನಡೆಸಿದ್ವಿ ಎಂಬುದನ್ನು ಸೋಫಿಯಾ ಖುರೇಷಿ ಇಂಚಿಂಚಾಗಿ ವಿವರಿಸಿದ್ರು.

ಪ್ರಧಾನಿ ಮೋದಿಯವರು ಮಹಿಳಾ ಸೇನಾಧಿಕಾರಿಗಳಿಂದಲೇ ವಿವರಣೆ ಕೊಡಿಸುವ ಮೂಲಕ ಪಾಕಿಸ್ತಾನಕ್ಕೆ ಸಿಂಧೂರದ ಶಕ್ತಿ ಏನು ಎಂಬುದನ್ನು ಪರೋಕ್ಷವಾಗಿ ವಿವರಣೆ ಕೊಡುವ ಕೆಲಸವನ್ನು ಮಾಡಿದ್ರು

Comments (0)

Your email address will not be published. Required fields are marked *

Back to top button