
ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳಲು ಶುರು ಮಾಡಿದೆ. ರಾತ್ರೋರಾತ್ರಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ.
ಮಧ್ಯರಾತ್ರಿ 1.44ಕ್ಕೆ ಸರಿಯಾಗಿ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ ಕ್ಷಿಪ್ರ ದಾಳಿ ದಾಳಿ ನಡೆಸಿದೆ.
ಭಾರತೀಯ ಸೇನೆ, ವಾಯುಪಡೆ, ನೌಕಾ ಪಡೆಗಳು ಸಂಯುಕ್ತವಾಗಿ ಈ ದಾಳಿಯನ್ನು ನಿರ್ವಹಿಸಿವೆ. ಕ್ಷಿಪಣಿಗಳ ಮೂಲಕ ಮುರಕೊಂಡು ಬಿದ್ದಿವೆ.
ಪಾಕ್ ಆಕ್ರಮಿತ ಕಾಶ್ಮೀರದ ಜೊತೆಗೆ ಪಾಕಿಸ್ತಾನದ ಮೂಲಭೂತ ಸೌಕರ್ಯಗಳು ಧ್ವಂಸಗೊಂಡಿವೆ.
ಭಾರತದ ಮೇಲೆ ಸೀಮಾಂತರ ಭಯೋತ್ಪಾದನೆ ದಾಳಿಗೆ ಸಂಚು ರೂಪಿಸಲಾಗಿತ್ತು ಎಂದು ಹೇಳಲಾದ 9 ಸ್ಥಾವರಗಳ ಮೇಲೆ ಈ ಸೇನಾ ಕಾರ್ಯಾಚರಣೆ ನಡೆದಿದೆ.
ಸಂಪೂರ್ಣ ಖಚಿತ ಗುರಿಯೊಂದಿಗೆ ಈ ದಾಳಿಗಳನ್ನು ಭಾರತೀಯ ಸೇನೆ ನಡೆಸಿದೆ. ಪಾಕ್ ಸೈನಿಕ ಶಿಬಿರಗಳ ಮೇಲೆ ದಾಳಿ ನಡೆಸಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಆಪರೇಷನ್ ಸಿಂದೂರ್ ಆಪರೇಷನ್ ಬೆನ್ನಲ್ಲೇ ಭಾರತ್ ಮಾತಾ ಕೀ ಜೈ ಹೆಸರಿನಲ್ಲಿ ಕೇಂದ್ರ ಸಚಿವರು, ಪ್ರಮುಖರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ.
ದೇಶಾದ್ಯಂತ ಇಂದು ಮಾಕ್ ಡ್ರಿಲ್ ನಿರ್ವಹಿಸಲು ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿತ್ತು. ಈ ಹೊತ್ತಲೇ ನಡೆಸಲಾದ ಈ ದಾಳಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.




