ದೇಶ/ವಿದೇಶ

ಪಾಕಿಸ್ತಾನಕ್ಕೆ ಹೋಗೋದಕ್ಕಿಂತ ಭಾರತದಲ್ಲಿ ಸಾಯುವುದೇ ಮೇಲು

ಪಹಲ್ಗಾಂನಲ್ಲಿ ಉಗ್ರರ ದಾಳಿಯಲ್ಲಿ 27 ಜನ ಹತ್ಯೆಗೀಡಾದ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಸಾಕಷ್ಟು ಕಠಿಣ ಕ್ರಮಕ್ಕೆ ಮುಂದಾಗ್ತಿದೆ. ಭಾರತದಲ್ಲಿ ಅಕ್ರಮವಾಗಿ ನೆಲೆಸಿರೋ ಪಾಕಿಸ್ತಾನೀಯರ ವೀಸಾ ರದ್ದುಗೊಳಿಸಿದೆ.. ಅಲ್ದೇ ಪಾಕ್ ಪ್ರಜೆಗಳನ್ನ ಈ ಕೂಡಲೇ ಭಾರತ ಬಿಟ್ಟು ತೊಲಗಿ ಅಂತ ಡೆಡ್​​ಲೈನ್ ಕೂಡ ಕೊಟ್ಟಿದೆ.

ಇದರ ನಡುವೆ ಭಾರತದಲ್ಲಿರೋ ಹಲವು ಪಾಕಿಸ್ತಾನಿಯರು ದೇಶ ಬಿಟ್ಟು ವಾಪಸ್ ಹೋಗೋಕೆ ಒಪ್ಪಿಕೊಳ್ತನೇ ಇಲ್ಲ.. ನಮಗೆ ಪಾಕಿಸ್ತಾನಕ್ಕೆ ಹೋಗುವುದಕ್ಕಿಂತ ಭಾರತದಲ್ಲಿ ಸಾಯುವುದೇ ವಾಸಿ ಎನ್ನುತ್ತಿದ್ದಾರೆ.

ನನಗೆ ಪಾಕಿಸ್ತಾನದಲ್ಲಿ ಯಾರೂ ಸಂಬಂಧಿಗಳಿಲ್ಲ, ನನ್ನ ಪತ್ನಿ, ಮಕ್ಕಳು, ಸಂಬಂಧಿಗಳು, ಸ್ನೇಹಿತರು,
ಸಹೋದ್ಯೋಗಿಗಳು ಸೇರಿ ನನ್ನವರು ಎಲ್ಲರೂ ಇಲ್ಲೇ ಇದ್ದಾರೆ, ಪಾಕಿಸ್ತಾನದಲ್ಲಿ ಯಾರೂ ಇಲ್ಲ ಅಂತ
ಜಮ್ಮು-ಕಾಶ್ಮೀರ ಪೊಲೀಸ್​ ಕಾನ್ಸ್​​ ಸ್ಟೇಬಲ್ ಇಫ್ತಿಕರ್​ ಅಲಿ ಹೇಳಿದ್ದಾರೆ.. ಪಾಕಿಸ್ತಾನದಿಂದ ಬಂದು ಕಾಶ್ಮೀರದಲ್ಲಿ ಇಫ್ತಿಕರ್ ಅಲಿ ಪೊಲೀಸ್ ಕೆಲಸಕ್ಕೆ ಸೇರಿದ್ದ. ಈಗ ಆತ ಸೇರಿ ತನ್ನ 8 ಮಂದಿ ಸಹೋದರರ ಜೊತೆಗೆ ಪಾಕಿಸ್ತಾನಕ್ಕೆ ವಾಪಸ್ ಹೋಗುವಂತೆ ಸೂಚನೆ ಕೊಟ್ಟಿದೆ. ಆದ್ರೆ ಕೇಂದ್ರ ಸರ್ಕಾರದ ಸೂಚನೆ ವಿರುದ್ಧ ಜಮ್ಮುಕಾಶ್ಮೀರ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಲಾಗಿತ್ತು.. ಆದ್ರೆ ಇಫ್ತಿಕರ್ ಅಲಿ ಸಹೋದರರ ಗಡಿಪಾರು ಮಾಡದಂತೆ ಹೈಕೋರ್ಟ್ ಕೂಡ ಆದೇಶಿಸಿದೆ.

Comments (0)

Your email address will not be published. Required fields are marked *

Back to top button