#Exclusive Newsರಾಜಕೀಯ

ರಾಜ್ಯದಲ್ಲಿ 2 ರಾಜಕೀಯ ಪಕ್ಷಗಳ ಉದಯಕ್ಕೆ ಸಿದ್ಧತೆ

ರಾಜ್ಯದಲ್ಲಿ ಎರಡು ಹೊಸ ರಾಜಕೀಯ ಪಕ್ಷಗಳ ಉದಯವಾಗಲಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್​ಗೆ ಹೊಸ ಪಾರ್ಟಿ ಸೆಡ್ಡು ಹೊಡೆಯಲು ಮುಂದಾಗಿದೆ. ಕನ್ನಡ ಆಸ್ಮಿತೆ ಉಳಿಸಲು ಕರವೇ ಪಾರ್ಟಿ ಜನ್ಮ ತಾಳಲಿದೆ. ಕರವೇ ನಾರಾಯಣಗೌಡ ನೇತೃತ್ವದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ತಯಾರಿಗಳು ನಡೆದಿವೆ.. ಇದು ದಳಪತಿಗಳಿಗೆ ಹೊಸ ತಲೆ ಬಿಸಿ ತಂದಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಬಿಜೆಪಿ ವಿರುದ್ಧ ರಾಜ್ಯದ ಎರಡು ಹಿಂದೂ ಐಕಾನ್ ಗಳು ಒಗ್ಗೂಡ್ತಿವೆ.ರಾಜ್ಯದಲ್ಲಿ ಹಿಂದುತ್ವದ ಕಟ್ಟಾಳುಗಳಾದ ಬಸನಗೌಡ ಪಾಟೀಲ್ ಯತ್ನಾಳ್​ ಮತ್ತು ಕೆಎಸ್ ಈಶ್ವರಪ್ಪ ಜೊತೆಗೂಡಿ ಹೊಸ ರಾಜಕೀಯ ಪಕ್ಷವನ್ನು ಕಟ್ಟಲು ಪ್ಲಾನ್ ಮಾಡ್ತಿದ್ದಾರೆ ಎನ್ನಲಾಗಿದೆ.. ಹಿಂದೂ ರಾಜಕೀಯ ಪಕ್ಷ ಸ್ಥಾಪನೆ ಮಾಡಿ ತಮ್ಮನ್ನು ಅಪಮಾನಿಸಿದ.. ಕಡೆಗಣಿಸಿದ ಪಕ್ಷಕ್ಕೆ.. ರಾಜಕೀಯ ನಾಯಕರಿಗೆ ಟಕ್ಕರ್ ಕೊಡಲು ಈಶ್ವರಪ್ಪ ಮತ್ತು ಯತ್ನಾಳ್ ಚಿಂತನೆ ನಡೆಸಿದ್ದಾರೆ ಎಂದು ಫ್ರೀಡಂ ಟಿವಿಗೆ ಉನ್ನತ ಮೂಲಗಳು ತಿಳಿಸಿವೆ.

ಈ ಬೆಳವಣೆಗೆಯಿಂದ ಬಿಜೆಪಿ ಮತ್ತು ಜೆಡಿಎಸ್ ನಿದ್ದೆಗೆಡುವಂತೆ ಆಗಿದೆ. ಹಿಂದೂ ರಾಜಕೀಯ ಪಕ್ಷ ಹುಟ್ಟಿಕೊಂಡ್ರೆ ಬಿಜೆಪಿಗೆ ಸಂಕಷ್ಟ ಎದುರಾಗಲಿದೆ. ಬಿಜೆಪಿಗೆ ತಮ್ಮ ಪಾರಂಪರಿಕ ವೋಟ್​ ಬ್ಯಾಂಕ್ ವಿಭಜನೆ ಆಗಬಹುದು ಎಂಬ ಭೀತಿ ಮನೆ ಮಾಡಿದೆ.

ಕರವೇ ಪಕ್ಷ ಸ್ಥಾಪನೆ ಆದ್ರೆ ಜೆಡಿಎಸ್​ ಪಕ್ಷದ ಪಾರಂಪರಗತ ವೋಟ್​​ ಬ್ಯಾಂಕ್ ಛಿದ್ರವಾಗುವ ನಿರೀಕ್ಷೆ ಇದೆ. ಹೀಗಾಗಿ ದೋಸ್ತಿಗಳಿಗೆ ಡಬಲ್ ಆತಂಕ ಶುರುವಾಗಲಿದೆ. ಈ ಬೆಳವಣಿಗೆಯಿಂದ ಸಹಜವಾಗಿಯೇ ಆಡಳಿತ ಪಕ್ಷ ಕಾಂಗ್ರೆಸ್​ಗೆ ಹಾಲು ಕುಡಿದಷ್ಟು ಸಂತಸ ತಂದಿದೆ. ಇದೇನಾದ್ರೂ ಸಂಭವಿಸಿದ್ರ ಮತ್ತೆ ನಮ್ದೇ ಅಧಿಕಾರ ಅಂತಿದೆ ಕಾಂಗ್ರೆಸ್​.

Comments (0)

Your email address will not be published. Required fields are marked *

Back to top button