ಕ್ರೈಂ ಸ್ಟೋರಿಜಿಲ್ಲೆರಾಜ್ಯ

ಮಗು ಕೊಂದು ಶವ ಹೊಯ್ಯತ್ತಿದ್ದ ಸ್ಪಾಟ್ ಅಪ್ ಫೌಂಡರ್ & ಸಿಇಓ ಬಂಧನ

ಚಿತ್ರದುರ್ಗ : ಗೋವಾದ ಹೋಟೆಲ್ ಒಂದರಲ್ಲಿ ತನ್ನ ಮಗುವನ್ನ ಕೊಂದು ಸೂಟ್ಕೇಸ್ ನಲ್ಲಿ ಶವ ಕೊಂಡೊಯ್ಯುತ್ತಿದ್ದ ಸ್ಪಾಟ್ ಆಫ್ ಫೌಂಡರ್ ಸಿಇಓ ಸೂಚನಾ ಸೇಠ್ ಅವರನ್ನು ಐಮಂಗಲ ಪೊಲೀಸರು ಬಂಧಿಸಿದ್ದಾರೆ.

ಸುಚಾನಾ ಸೇಠ್ ಗೋವಾದ ಹೋಟೆಲ್ ನಲ್ಲಿ ನಾಲ್ಕು ವರ್ಷದ ಗಂಡು ಮಗುವನ್ನು ಹತ್ಯೆ ಮಾಡಿ, ಸೂಟ್ ಕೇಸ್ ನಲ್ಲಿ ಮಗುವಿನ ಶವದೊಂದಿಗೆ ಗೋವಾದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸರು ತಾಯಿಯನ್ನು ಬಂಧಿಸಿದ್ದಾರೆ. ಆರೋಪಿಯು ಗೋವಾದಿಂದ ಟ್ಯಾಕ್ಸಿ ಮಾಡಿಕೊಂಡು ತೆರಳುತ್ತಿದ್ದಳು.

ಗೋವಾದಲ್ಲಿ ತಂಗಿದ್ದ ಹೋಟೆಲ್ ನವರಿಗೆ ಅನುಮಾನ ಬಂದ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೋಟೆಲ್ ರೂಮಿನಲ್ಲಿ ರಕ್ತದ ಕಲೆಗಳು ಪತ್ತೆ ಹಿನ್ನೆಲೆ ಅನುಮಾನ ಬಂದಿತ್ತು. ರೂಮಿಗೆ ಕರೆದೊಯ್ದಿದ್ದ ಮಗು ವಾಪಸ್ ಹೋಗುವಾಗ ಇರಲಿಲ್ಲ. ಇದನ್ನು ಪ್ರಶ್ನಿಸಿದಾಗ ಸಂಬಂಧಿಕರ ಮನೆಗೆ ಕಳಸಿದ್ದೇನೆಂದು ಸುಳ್ಳು ಹೇಳಿದ್ದ ಸುಚನಾ ಸೇಠ್.ಬಳಿಕ ಗೋವಾ ಪೊಲೀಸ್ ಗೆ ಮಾಹಿತಿ ಬಳಿಕ ಟ್ಯಾಕ್ಸಿ ಡ್ರೈವರ್ ಸಂಪರ್ಕ ಮಾಡಿ ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಟ್ಯಾಕ್ಸಿ ಡ್ರೈವರ್ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಟ್ಯಾಕ್ಸಿ ನಿಲ್ಲಿಸಿದ್ದಾನೆ. ಇದಾದ ನಂತರ ಚಾಲಕ ಆರೋಪಿಯನ್ನು ಐಮಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾರ್ ನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್ ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಶವ ಮಾರ್ಚರಿಗೆ ಶಿಫ್ಟ್ ಮಾಡಿ ಆರೋಪಿ ಸುಚನಾ ವಶಕ್ಕೆ ಪಡೆದುಕೊಂಡಿದ್ದಾರೆ. ಗೋವಾ ಪೊಲೀಸರಿಗೆ ಆರೋಪಿ ಒಪ್ಪಿಸಲು ಐಮಂಗಲ ಪೊಲೀಸರು ಕಾದಿದ್ದಾರೆ. ಗೋವಾದ ಪೊಲೀಸ್ ಠಾಣೆಯಲ್ಲಿ  ಪ್ರಕರಣಗಳು ದಾಖಲಾಗಿವೆ.

Comments (0)

Your email address will not be published. Required fields are marked *

Back to top button
Verified by MonsterInsights