ಮನರಂಜನೆಸಿನಿಮಾ

ಯಶ್ ಬರ್ತ್ಡೆ ಗೆ ಇದೆಂಥಾ ಅಪಶಕುನ? ಸುಟ್ಟು ಕರಕಲಾದ ಯಶ್ ಫ್ಯಾನ್ಸ್

ಸಂಭ್ರಮದ ದಿನವೇ ಸಾವು,,!
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಲು ಮುಂದಾಗಿದ್ದ ಯಶ್ ಅಭಿಮಾನಿಗಳು ಬೃಹತ್ ಕಟೌಟ್ ನಿಲ್ಲಿಸುವ ವೇಳೆ ಕಟೌಟ್ ವಿದ್ಯುತ್ ತಂತಿಗೆ ತಗುಲಿ ಕಟೌಟ್ ಹಿಡಿದಿದ್ದ ಯುವಕರಿಗೆ ವಿದ್ಯುತ್ ಹರಿದಿದೆ. ಇದರ ಪರಿಣಾಮ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಮೂವರು ಯುವಕರು. ಘಟನಾವಳಿ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ,ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ .

ಇಂದು ಬರ್ತಡೇ ಆಚರಿಸಿಕೊಳ್ಳಬೇಕಿದ್ದ ನಟ ಯಶ್ ಅವರ ಸಂಭ್ರಮಕ್ಕೆ ಸೂತಕದ ಛಾಯೆ ಆವರಿಸಿದೆ , ಯಶ್ ಹುಟ್ಟುಹಬ್ಬದ ಭಾಗವಾಗಿ ಅಭಿಮಾನಿಗಳು ನಿನ್ನೆಯೇ ಬರ್ತಡೇ ಪ್ಲಾನ್ ಮಾಡಿ ಮಧ್ಯೆರಾತ್ರಿಯೇ ಸೂರಣಗಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಕಟೌಟ್ ನಿಲ್ಲಿಸಲು ಮುಂದಾಗಿದ್ದ ಯುವಕರು,ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ .

ಮೃತರಾದ ಮುರಳಿ ನಡವಿನಮನಿ (20), ಹನಮಂತ ಹರಿಜನ್ (21), ಹಾಗೂ ನವೀನ್ ಗಾಜಿ(19) ಎಂಬ ಮೂವರು ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ,ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದು ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ನಟ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.ಕೊರೋನ ಹಾವಳಿ ಮತ್ತು ನಾನಾ ಕಾರಣಗಳಿಂದ ಅಭಿಮಾನಿಗಳಿಂದ ಅಂತರ ಕಾಯ್ದುಕೊಂಡಿದ್ದ ಯಶ್ ,ಈ ವರ್ಷ ಅಭಿಮಾನಿಗಳ ಜೊತೆ ಸಂಭ್ರಮಿಸಬೇಕಿದ್ದ ಯಶ್ ಸಿನಿಮಾಗಳ ಕೆಲಸಗಳ ಕಾರಣ ವಿದೇಶದಕ್ಕೆ ತೆರಳಿದ್ದಾರೆ, ಇತ್ತೀಚೆಗೆ ಪತ್ರ ಬರೆದು ಈ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.

“ಜನವರಿ 8.. ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನ ನನ್ನ ಜೊತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ..ನನಗೂ ಅಷ್ಟೇ.. ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ ಸಿನಿಮಾದ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ 8 ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ ನನ್ನ ಅನುಪಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು.. ಸದಾಕಾಲ ನನ್ನ ಜೊತೆ ಇರುವ. ನಿಮ್ಮ ಪ್ರೀತಿ, ಅಭಿಮಾನವೇ. ನನಗೆ ಹುಟ್ಟುಹಬ್ಬದ ಉಡುಗೊರೆ.ನಿಮ್ಮ ಪ್ರೀತಿಯ ಯಶ್” ಎಂದು 4 ದಿನಗಳ ಹಿಂದೆ ಯಶ್ ಪೋಸ್ಟ್ ಮಾಡಿದ್ದರು. ಮೃತರ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ ,ಸ್ನೇಹಿತರನ್ನ ಕಳೆದುಕೊಂಡ ಮೃತರ ಸ್ನೇಹಿತರ ಮನೆಯಲ್ಲೂ ಸೂತಕದ ಛಾಯೆ ಆವರಿಸಿದೆ.

 

Comments (0)

Your email address will not be published. Required fields are marked *

Back to top button